ಕುಂಬಳೆ: ಮೊಬೈಲ್ ಫೋನ್ ತರಗತಿಗೆ ತಂದ ವಿಷಯವನ್ನು ಪ್ರಾಂಶುಪಾಲರೊಂದಿಗೆ ತಿಳಿಸಿದ ವಿದ್ಯಾರ್ಥಿನಿಯರನ್ನು ಫೋನ್ ತಂದ ವಿದ್ಯಾರ್ಥಿ ಪ್ರಶ್ನಿಸಿದ್ದು, ಈ ವಿದ್ಯಾರ್ಥಿಯನ್ನು ಇತರ ಮೂವರು ವಿದ್ಯಾರ್ಥಿಗಳು ಸೇರಿ ತರಗತಿ ಕೊಠಡಿಯಲ್ಲಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಹಲ್ಲೆಗೈದ ಮೂವರು ವಿದ್ಯಾರ್ಥಿಗಳ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋ ಮವಾರ ಬೆಳಿಗ್ಗೆ 10 ಗಂಟೆ ವೇಳೆ ಮುಟ್ಟಂ ಕುನಿಲ್ ಶಾಲೆಯಲ್ಲಿ ಘಟನೆ ನಡೆದಿದೆ. ಮಂಗಲ್ಪಾಡಿ ನಯಾ ಬಜಾರ್ ನಿವಾಸಿಯಾದ ವಿದ್ಯಾರ್ಥಿಯ ದೂರಿನಂತೆ ಬಂಬ್ರಾಣ, ಉಪ್ಪಳ ನಿವಾಸಿಗಳಾದ ವಿದ್ಯಾರ್ಥಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನಾದ ವಿದ್ಯಾರ್ಥಿ ತರಗತಿ ಕೊಠಡಿಗೆ ಮೊಬೈಲ್ ಫೋನ್ ತಂದಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯವನ್ನು ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್‌ರಲ್ಲಿ ತಿಳಿಸಿದ್ದರು. ಇದನ್ನು ತಿಳಿದ ಪ್ರಸ್ತುತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದನು. ಇದಕ್ಕೆ ಪ್ರತಿಕಾರವಾಗಿ ಪ್ಲಸ್‌ವನ್ ಕಾಮರ್ಸ್ ಕೊಠಡಿ ಯಲ್ಲಿ ಪ್ರಕರಣದಲ್ಲಿ ಆರೋ ಪಿಗಳಾದ ಮೂವರು ವಿದ್ಯಾರ್ಥಿ ಗಳು ಸೇರಿ ದೂರು ದಾರನಿಗೆ ಕೈಯಲ್ಲಿ ಹಾಗೂ ಮರದ ಬೆತ್ತದಿಂದ ಹೊಡೆದು ಗಾಯ ಗೊಳಿಸಿರುವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.







