ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ  ಬಸ್ ಕಂಡಕ್ಟರ್ ನಿಧನ

ನೀರ್ಚಾಲು:  ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಖಾಸಗಿ ಬಸ್ ಕಂಡಕ್ಟರ್ ನಿಧನ ಹೊಂದಿದರು. ನೀರ್ಚಾಲು ಏಣಿಯರ್ಪು ಬುರುಡಡ್ಕದ ಉದಯ ಕುಮಾರ್ (56) ಮೃತಪಟ್ಟ ದುರ್ದೈವಿ. ಇವರು ಕುಂಬಳೆ- ಮುಳ್ಳೇರಿಯ ರೂಟ್‌ನಲ್ಲಿ ಸಂಚರಿಸುವ ಗುರುವಾಯೂರಪ್ಪನ್ ಬಸ್‌ನ ಕಂಡಕ್ಟರ್ ಆಗಿದ್ದರು. ಈ ಹಿಂದೆ ಕಾಸರಗೋಡು- ತಲಪಾಡಿ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲೂ ಕಂಡಕ್ಟರ್ ಆಗಿ  ಕೆಲಸ ನಿರ್ವಹಿಸಿದ್ದರು. ಉಸಿರಾಟ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ದಿವಂಗತರಾದ ಡ್ರೈವರ್ ಬಾಲಕೃಷ್ಣನ್- ಪದ್ಮಾವತಿ ದಂಪತಿಯ ಪುತ್ರನಾದ ಮೃತರು ಪತ್ನಿ ಪೂರ್ಣಿಮ, ಮಕ್ಕಳಾದ ಪ್ರಣವ್, ವಿಸ್ಮಯ, ಸಹೋದರರಾದ ವಿನೋದ, ನಾರಾಯಣ, ಅಜಿತ್ ಕುಮಾರ್ (ಚಾಲಕ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page