ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಆರಾಧನಾ ಕೇಂದ್ರಗಳಿಗೆ ಆರ್ಥಿಕ ಸಹಾಯ ಒದಗಿಸಲು ಸಚಿವರಿಗೆ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ. ಶಂಕರ ಮನವಿ

ತಿರುವನಂತಪುರA : ಕಾಸರಗೋ ಡು ಹಾಗೂ ಮಂಜೇಶ್ವರ ತಾಲೂಕುಗಳ ವಿವಿಧ ಭಾಗಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಮುಗೇರ, ನಲಿಕೆತ್ತಾಯ, ಚಕ್ಲಿಯ ಮುಂತಾದ ವಿಭಾಗಗಳ ಖಾಸಗಿ ಕ್ಷೇತ್ರ ಹಾಗೂ ದೈವಸ್ಥಾನಗಳಿಗೆ ಅರ್ಹವಾದ ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸಬೇಕೆಂದು ಆಗ್ರಹಿಸಿ ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ ಕೆ ಶಂಕರ ಆದೂರು ಅವರು ತಿರುವನಂತಪುರದಲ್ಲಿ ಸಚಿವ ವಿ. ಎನ್. ವಾಸವನ್‌ರನ್ನು ಭೇಟಿ ಮಾಡಿ ಮನವಿ ನೀಡಿದರು. ದೇವಸ್ವಂ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಕ್ಷೇತ್ರ ಹಾಗೂ ದೈವಸ್ಥಾನಗಳಿಗೆ ಬೋರ್ಡಿಗೆ ಬರುವ ಮೊತ್ತ ಹಣದ 10 ಶೇ. ಮಾತ್ರ ಸಹಾಯ ನೀಡಲಾಗುತ್ತಿದೆ. ಇದರ ಬದಲಾಗಿ ಆರ್ಥಿಕವಾಗಿ ಹಿಂದುಳಿದಿರುವ ಪ್ರಸ್ತುತ ವರ್ಗಗಳಿಗೆ 5 ಲಕ್ಷದಿಂದ 10 ಲಕ್ಷ ರೂ. ವರೆಗೆ ನೀಡಬೇಕೆಂದು ಸಚಿವರನ್ನು ಒತ್ತಾಯಿ ಸಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಕ್ಷೇಮ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ಅಧ್ಯಕ್ಷ ಜಗದೀಶ್ , ಪ್ರಾಂತ್ಯ ಸದಸ್ಯ ಚಂದ್ರನ್ ಕೊಕ್ಕಾಲ್ ಉಪಸಿತರಿದ್ದರು.

RELATED NEWS

You cannot copy contents of this page