ಕಣ್ಣೂರು: ಪುದಿಯಂಗಾಡಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿ ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇನ್ನೋರ್ವ ಮೃತಪಟ್ಟಿದ್ದಾರೆ. ಒಡಿಶ್ಶಾ ನಿವಾಸಿ ಜಿತೇಂದ್ರ ಬಹ್ರ (31) ನಿನ್ನೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇದರಿಂದ ಈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ. ಒಡಿಶ್ಶಾ ನಿವಾಸಿಗಳಾದ ಶಿಬಾ ಬೆಹ್ರ (೩೪), ಸುಭಾಷ್ ಬೆಹ್ರ (53), ನಿಗಮ್ ಬೆಹ್ರ (38) ಎಂಬಿವರು ಇತ್ತೀಚೆಗೆ ಮೃತಪಟ್ಟಿದ್ದರು. ಪುದಿಯಂಗಾಡಿ ಫಿಶ್‌ಪ್ಲಾಂಟ್ ಸಮೀಪ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಇತ್ತೀಚೆಗೆ ಬೆಳಿಗ್ಗೆ ೬ ಗಂಟೆಗೆ ದುರಂತ ಸಂಭವಿಸಿತ್ತು. ರಾತ್ರಿ ಗ್ಯಾಸ್‌ಸ್ಟವ್‌ನ ನೋಬ್ ಸರಿಯಾಗಿ ಮುಚ್ಚಿರಲಿಲ್ಲವೆಂದು ತಿಳಿದು ಬಂದಿದೆ. ಇದನ್ನು ತಿಳಿಯದೆ ಬೆಳಿಗ್ಗೆ ಲೈಟರ್‌ನಿಂದ ಗ್ಯಾಸ್ ಉರಿಸಿದಾಗ ಬೆಂಕಿ ಹತ್ತಿಕೊಂಡಿತ್ತು.







