ಕೊಚ್ಚಿ: ದಾಖಲೆಗಳನ್ನು ಸೃಷ್ಟಿಸಿ ಮುಂದುವರಿಯುತ್ತಿರು ಚಿನ್ನದ ದರ ಇಂದು ಏರಿಕೆಯಲ್ಲಿ ದಾಖಲೆ ಸೃಷ್ಟಿಸಿದೆ. ಒಂದೇ ದಿನ 305 ರೂ. ಗ್ರಾಂನಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಪವನ್ಗೆ 97360 ರೂ. ಆಗಿ ಹೆಚ್ಚಳವಾಗಿದ್ದು, ಒಂದು ಲಕ್ಷಕ್ಕೆ ಇನ್ನು ಕಿರು ಬೆರಳಿನ ದೂರವಷ್ಟೇ ಉಳಿದಿದೆ. ಇಂದು ಪವನ್ಗೆ 2,440 ರೂ. ಹೆಚ್ಚಳವಾಗಿದೆ ಒಂದು ಗ್ರಾಂಗೆ 12,170 ರೂನಂತೆ ವಹಿವಾಟು ನಡೆಯುತ್ತಿದೆ. ಇದರೊಂದಿಗೆ ಎರಡು ವಾರದಲ್ಲಿ ಒಂದು ಪವನ್ ಚಿನ್ನದ ಬೆಲೆಯಲ್ಲಿ 10,800 ರೂ. ಹೆಚ್ಚಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆ ಸೃಷ್ಟಿಸಿ ಹೆಚ್ಚುತ್ತಿದೆ. ಯುಎಸ್-ಚೈನಾ ವ್ಯಾಪಾರ ಘರ್ಷಣೆ ತೀವ್ರವಾಗಿರುವುದು, ಫೆಡ್ ರಿಸರ್ವ್ ದರ ಕಡಿಮೆ ಮಾಡಬಹುದೆಂಬ ಸೂಚನೆ ಈಗಿನ ಚಿನ್ನದ ದರ ಹೆಚ್ಚಳಕ್ಕೆ ಕಾರಣವೆನ್ನಲಾಗಿದೆ. ಠೇವಣಿದಾರರು ಭಾರೀ ಪ್ರಮಾಣದಲ್ಲಿ ಚಿನ್ನದಲ್ಲಿ ಹೂಡಿಕೆ ನಡೆಸುತ್ತಿರುವುದು ಕೂಡಾ ಏರಿಕೆಗೆ ಕಾರಣವಾಗಿದೆ.







