ವಿಧಾನಸಭಾ ಅಧಿವೇಶನ ಜ. ೨೫ರಿಂದ: ಫೆ. ೫ಕ್ಕೆ ರಾಜ್ಯ ಬಜೆಟ್ ಮಂಡನೆ

ತಿರುವನಂತಪುರ:  ರಾಜ್ಯ ವಿಧಾನಸಭೆಯ ಮುಂದಿನ ಬಜೆಟ್ ಅಧಿವೇಶನ ಜನವರಿ ೨೫ರಂದು ಆರಂಭಗೊಳ್ಳಲಿದೆ. ೨೦೨೪-೨೫ನೇ ಸಾಲಿನ ಆರ್ಥಿಕ ವರ್ಷದ ರಾಜ್ಯ ಮುಂಗಡ (ಬಜೆಟ್) ಪತ್ರವನ್ನು ಫೆಬ್ರವರಿ ೫ರಂದು ಬೆಳಿಗ್ಗೆ ೯ ಗಂಟೆಗೆ ಹಣಕಾಸು ಸಚಿವ ಕೆ.ಎನ್. ಬಾಲ ಗೋಪಾಲನ್ ಮಂಡಿಸುವರು. ಕೇಂದ್ರ ಬಜೆಟ್  ಫೆಬ್ರವರಿ ೧ರಂದು ಮಂಡನೆಯಾಗುವ ಸಾಧ್ಯತೆ ಇದೆ. ಅದಕ್ಕೆ ಹೊಂದಿ ಕೊಂಡು ರಾಜ್ಯ ಬಜೆಟ್‌ನಲ್ಲಿ ಅಗತ್ಯದ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ.ಒಂದು ವೇಳೆ ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆ ಘೋಷಿ ಸಿದಲ್ಲಿ, ವಿಧಾನಸಭಾ ಅಧಿವೇಶ ನವನ್ನು ಮುಂದೂಡಬೇಕಾಗಿ ಬರಲಿದೆ. ಹಾಗೆ ನಡೆದಲ್ಲಿ ಚುನಾವಣೆ ಬಳಿಕ ರಾಜ್ಯ ಬಜೆಟ್‌ಗೆ ಅನುಮೋ ದನೆ ಪಡೆಯಲು ಮತ್ತೆ ವಿಧಾನಸಭಾ ಅಧಿವೇಶನ ಕರೆಯುವ ಸಾಧ್ಯತೆಯೂ ಇದೆ.

RELATED NEWS

You cannot copy contents of this page