ಮಳೆ: ರಸ್ತೆಯಲ್ಲಿ ಕಟ್ಟಿನಿಂತ ನೀರಿನಿಂದ ಕುಂಬಳೆಯಲ್ಲಿ ಸಮಸ್ಯೆ

ಕುಂಬಳೆ: ನಿನ್ನೆ ರಾತ್ರಿ ಸುರಿದ ಮಳೆಯಿಂದ ಕುಂಬಳೆಯಲ್ಲಿ ರಸ್ತೆ ಬದಿ ನೀರು ಕಟ್ಟಿ ನಿಂತು ಪ್ರಯಾಣಿಕರು ಸಮಸ್ಯೆಗೀಡಾದರು. ಕುಂಬಳೆ- ಬದಿಯಡ್ಕ ರಸ್ತೆಯಲ್ಲಿ  ಸೀತಾಂಗೋಳಿ, ಬದಿಯಡ್ಕ, ಮುಳ್ಳೇರಿಯ ಭಾಗಕ್ಕೆ ತೆರಳುವ ಬಸ್‌ಗಳ ನಿಲುಗಡೆ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಬಸ್ ಪ್ರಯಾಣಿಕರು ಮಾತ್ರವಲ್ಲದೆ ಪಾದಚಾರಿಗಳು ಕೂಡಾ ನಡೆದಾಡಲು ಸಮಸ್ಯೆ ಎದುರಿಸಬೇಕಾಗಿ ಬಂತು. ಈ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದರೂ ಅದಕ್ಕೆ ಪರಿಹಾರ ಕಾಣಲು ಸಂಬಂಧ ಪಟ್ಟವರು ಮುಂದಾಗಲಿಲ್ಲ. 

RELATED NEWS

You cannot copy contents of this page