ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ಸಂಬಂಧಪಟ್ಟ ಕಟ್ಟಡದ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸ್ಮಾರಕ ಕಟ್ಟಡದ ಉದ್ಘಾಟನೆ ನಿನ್ನೆ ನಡೆದಿದೆ. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎ. ರಹ್ಮಾನ್, ಸಬೂರ, ನಸೀಮ, ಪಂಚಾಯತ್ ಸದಸ್ಯ ರಾದ ಯೂಸಫ್ ಉಳುವಾರು, ಅನ್ವರ್ ಆರಿಕ್ಕಾಡಿ, ರವಿರಾಜ್ ತುಮ್ಮ, ರಸಿಯ, ತಾಹಿರಾ ಜಿ. ಶಂಸೀರ್, ಸಿ.ಎಂ. ಮುಹಮ್ಮದ್, ಕೌಲತ್ ಬೀವಿ, ಮಂಜುನಾಥ ಆಳ್ವ, ಎ.ಕೆ. ಆರೀಫ್, ಬಿ.ಎನ್. ಮುಹಮ್ಮದಲಿ ಮೊದಲಾ ದವರು ಭಾಗವಹಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಬಿಜೆಪಿಯ ಎಲ್ಲಾ ಸದಸ್ಯರು ಹಾಗೂ ಸಿಪಿಎಂನ ಇಬ್ಬರು ಸದಸ್ಯರು ಭಾಗವಹಿಸಲಿಲ್ಲ.
