ಅನಂತಪುರ ಉದ್ದಿಮೆ ಪಾರ್ಕ್‌ನಿಂದ ತ್ಯಾಜ್ಯ ನೀರು ಜನವಾಸ ಕೇಂದ್ರಕ್ಕೆ: ಮತ್ತೆ ಸಮಸ್ಯೆ ಸೃಷ್ಟಿ

ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‌ನ ಕೋಳಿ ಮಾಂಸ ಸಂಸ್ಕರಣಾ ಪ್ಲಾಂಟ್‌ನಿಂದ ತ್ಯಾಜ್ಯ ನೀರು ಹೊರಕ್ಕೆ ಹರಿದು ಹೋಗುತ್ತಿರುವುದರಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಂಟ್‌ನಿಂದ ಹರಿಯುವ ತ್ಯಾಜ್ಯ ನೀರು ಸಮೀಪದ ಬಾವಿಗಳ ಸಹಿತ ಕುಡಿಯುವ ನೀರಿನ ಮೂಲಗಳಲ್ಲಿ ಹರಡುತ್ತಿದೆ. ಕಾಮನಬೈಲು ಎಸ್‌ಟಿ ಕಾಲನಿ, ಅಂಗನವಾಡಿ ಪರಿಸರದ ಮೂಲಕ ತ್ಯಾಜ್ಯ ನೀರು ಹರಿಯುತ್ತಿದ್ದು, ಅದರಿಂದ ಅಸಹನೀಯ ದುರ್ನಾತವೂ ಬೀರುತ್ತಿದೆ. ಇದು ಮಾರಕ ರೋಗಗಳಿಗೆ ಕಾರಣವಾಗಬಹುದೆಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪರಿಸರ ಮಾಲಿನ್ಯದಿಂದಾಗಿ ನಾಡಿನಲ್ಲಿ ರೋಗಭೀತಿ ಸೃಷ್ಟಿಯಾಗುತ್ತಿರುವಾಗಲೇ ರೋಗಾಣುಗಳನ್ನು ಸೃಷ್ಟಿಸಲು ನಡೆಸುವ ಯತ್ನ ತಡೆಯಬೇಕೆಂದು ನಾಗರಿಕರು ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಒಂದು ವರ್ಷದ ಹಿಂದೆ ಇದೇ ಸಮಸ್ಯೆ ಇಲ್ಲಿ ಹುಟ್ಟಿಕೊಂಡಿತ್ತು. ಅಂದು ನಾಗರಿಕರು ನಡೆಸಿದ ಉಪವಾಸ ಸತ್ಯಾಗ್ರಹ ಬಳಿಕ ಸಮಸ್ಯೆಗೆ ಪರಿಹಾರ ಕಾಣುವುದಾಗಿ ಸಂಬಂಧಪಟ್ಟವರು ಭರವಸೆ ನೀಡಿದ್ದರು.  ಅನಂತರ ತ್ಯಾಜ್ಯ ನೀರು ಜನವಾಸ ಪ್ರದೇಶಗಳಿಗೆ ಹರಿಯುತ್ತಿರುವುದನ್ನು ತಡೆಯಲಾಗಿತ್ತಾದರೂ ಇದೀಗ ಅದೇ ಸಮಸ್ಯೆ ಸೃಷ್ಟಿಯಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ.

RELATED NEWS

You cannot copy contents of this page