ಕುಂಬಳೆ: ರೋಗಾಣುಗಳನ್ನು ನಾಶಗೊಳಿಸುವ ಉದ್ದೇಶದಿಂದ ಕುಂಬಳೆಯಲ್ಲಿ ವಾಟರ್ ಅಥೋರಿಟಿ ನೌಕರರು ಕುಡಿಯುವ ನೀರು ಟ್ಯಾಂಕ್ ತೆರೆದ ಹಿನ್ನೆಲೆಯಲ್ಲಿ ಕುಂಬಳೆ ಪೇಟೆಯ ವಿವಿಧೆಡೆ ನೀರು ತುಂಬಿಕೊಂಡಿತು. ಕುಂಬಳೆ ಪೊಲೀಸ್ ಠಾಣೆ ಪರಿಸರದ ಮೂಲಕ ಹರಿದ ನೀರು ಶ್ರೀ ಗೋಪಾಲಕೃಷ್ಣ ಕ್ಷೇತ್ರವರೆಗೆ ತಲುಪಿದೆ. ಪರಿಸರದ ಮನೆಗಳಿಗೂ ನೀರು ನುಗ್ಗುವ ಸ್ಥಿತಿ ಕಂಡು ಬಂತೆಂದು ದೂರಲಾಗಿದೆ. ಈ ಬಗ್ಗೆ ವಾಟರ್ ಅಥೋರಿಟಿ ನೌಕರರೊಂದಿಗೆ ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ವಿಚಾರಿಸಿದಾಗ ಇದು ಅಕಸ್ಮಾತ್ ಸಂಭವಿಸಿದ ಘಟನೆಯಾ ಗಿದೆ. ಇನ್ನು ಮುಂದೆ ಇದುಂಟಾಗ ದಂತೆ ಜಾಗ್ರತೆ ವಹಿಸುವುದಾಗಿ ನೌಕರರು ತಿಳಿಸಿದ್ದಾರೆನ್ನಲಾಗಿದೆ.
ಕುಂಬಳೆ ಪರಿಸರದಲ್ಲಿ ರೋಗ ಸೋಂಕು ಉಂಟಾಗದಿರಲು ಕುಡಿಯುವ ನೀರಿನ ಟ್ಯಾಂಕ್ ತೆರೆದು ಬಿಟ್ಟ ಬಳಿಕ ಅದರೊಳಗೆ ಅಮೀಬಿಕ್ ರೋಗಾಣುಗಳನ್ನು ನಾಶಗೊಳಿಸಲು ಶುಚೀಕರಣ ನಡೆಸಲಾಗಿದೆ. ಮಾತ್ರವಲ್ಲದೆ ಒಂದೂವರೆ ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕನ್ನು ಮುರಿದು ತೆಗೆಯಲಾಗುವುದೆಂದೂ ಅದರ ಕಾಲಾವಧಿ ಈಗಾಗಲೇ ಮುಗಿದಿದೆ ಎಂದು ನೌಕರರು ತಿಳಿಸಿದ್ದಾರೆ.
ಅಮೀಬಿಕ್ ರೋಗಾಣುಗಳು ಶುದ್ಧ ನೀರಿನಲ್ಲೂ ಹರಡುತ್ತಿದೆ. ಆದ್ದರಿಂದ ಕುಡಿಯುವ ನೀರು ಟ್ಯಾಂಕ್‌ಗಳನ್ನು ಸಮರೋಪಾದಿಯಲ್ಲಿ ಶುಚಿಗೊಳಿಸಬೇಕೆಂದು ಸರಕಾರ ನಿರ್ದೇಶಿಸಿದೆ. ಅದರಂತೆ ಕುಂಬಳೆ ಯಲ್ಲಿ ಟ್ಯಾಂಕ್ ತೆರೆದಿರುವುದೇ ನೀರು ಪರಿಸರಪ್ರದೇಶಗಳಲ್ಲಿ ತುಂಬಿಕೊಳ್ಳಲು ಕಾರಣವಾಯಿತು.