ಕೆಲಸಕ್ಕೆಂದು ತೆರಳಿದ ಯುವಕ ನಿರ್ಜನ ಪ್ರದೇಶದಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಿಂಜ: ಮನೆಯಿಂದ ಕೆಲಸ ಕ್ಕೆಂದು ತೆರಳಿದ ಯುವಕನೋರ್ವ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಕುಳೂರು ನಿವಾಸಿ ದಿ| ಸಂಜೀವರ ಪುತ್ರ ಹರೀಶ (40) ಮೃತಪಟ್ಟ ಯುವಕ. ಕೂಲಿ ಕಾರ್ಮಿಕರಾಗಿದ್ದ ಇವರು ನಿನ್ನೆ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಸುಮಾರು 8.30ರ ವೇಳೆ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆ ಪರಿಸರದಲ್ಲಿ ನಿನ್ನೆ ಸಂಜೆ ಅಂತ್ಯ ಸಂಸ್ಕಾರ ನಡೆಯಿತು. ಮೃತರು ತಾಯಿ ಲಕ್ಷಿ÷್ಮÃ, ಪತ್ನಿ ಬೇಬಿ, ಮಕ್ಕಳಾದ ಯಜ್ಞಶ್ರೀ, ಯಶ್ವಿತ, ಲಿಖಿತ್, ಸಹೋದರರಾದ ಹರಿ ಪ್ರಸಾದ್, ಗಿರೀಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಮೀಂಜ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ವಾರ್ಡ್ ಪ್ರತಿನಿದಿs ಜನಾರ್ದನ ಪೂಜಾರಿ, ಸರಸ್ವತಿ, ಬಾಬು.ಸಿ ಕುಳೂರು ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.

RELATED NEWS

You cannot copy contents of this page