ಸಮಾನಾಂತರ ಲಾಟರಿ: ನಾಲ್ವರ ಸೆರೆ

ಕಾಸರಗೋಡು: ಸಮಾನಾಂತರ ಲಾಟರಿ ಟಿಕೆಟ್‌ಗಳ  ಮಾರಾಟ ಮಾಡುತ್ತಿದ್ದ ಆರೋಪದಂತೆ  ನಾಲ್ವರನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಶಿರಿಬಾಗಿಲು ಭಗವತೀ ನಗರದ ಜಿ.ಆರ್. ರಾಧಾಕೃಷ್ಣ (31), ಕೂ ಡ್ಲು  ರಾಮದಾಸನಗರದ ಅಭಿಷೇಕ್ ಕುಮಾರ್ (32), ರಾಮದಾಸನಗರ ಹೊಸಮನೆ ರಸ್ತೆ ಬಳಿಯ ಪವನ್‌ರಾಜ್ ಸಿ (25) ಮತ್ತು ಕಾಸರಗೋಡು ಕೋಟೆಕಣಿ ಕ್ರಾಸ್ ರಸ್ತೆ ಬಳಿಯ ರಾಜಾಪ್ರಸಾದ್ ಎಸ್ (36) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಿ ಕೇಸು ದಾಖಲಿಸಲಾಗಿದೆ. ಬಂಧಿತರಿಂದ ೨೬,೪೯೦ರೂ. ನಗದು ವಶಪಡಿಸಲಾಗಿದೆ.  ಕೇರಳ ರಾಜ್ಯ ಲಾಟರಿ ಕಾನೂನಿನ ವಿರುದ್ಧ ಮೊಬೈಲ್ ಫೋನ್ ಮತ್ತು ಕಾಗದಗಳನ್ನು ಉಪಯೋಗಿಸಿ

ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದರ ಫಲಿತಾಂಶವನ್ನು ಫೋನ್ ಮೂಲಕ ಕಳಹಿಸಿಕೊಡು ತ್ತಿರುವುದು ಇಂತಹ ಸಮಾನಾಂತರ ಲಾಟರಿ ಮಾರಾಟದ ರೀತಿಯಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ನಂದಗೋಪನ್ ಎಂ ಅವರ ಮೇಲ್ನೋಟದಲ್ಲಿ ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ರಾಜೀವನ್ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page