ಶಬರಿಮಲೆ ಚಿನ್ನ ಕಳವು ತನಿಖೆ ಹೈದರಾಬಾದ್, ಬೆಂಗಳೂರು, ತಮಿಳುನಾಡಿಗೆ ವಿಸ್ತರಣೆ

ಪಂದಳಂ: ಶಬರಿಮಲೆ ದೇಗುಲದ ಚಿನ್ನ ಕಳವುಗೈದ ಪ್ರಕರಣದ ತನಿಖೆಯನ್ನು  ವಿಶೇಷ ತನಿಖಾ ತಂಡ ಹೈದರಾಬಾದ್, ಬೆಂಗಳೂರು ಮತ್ತು ತಮಿಳುನಾಡಿಗೂ ವಿಸ್ತರಿಸಿದೆ. ಶಬರಿಮಲೆ ದೇವಸ್ಥಾನ ದೊಂದಿಗೆ ವರ್ಷಗಳಿಂದ ನಂಟು ಹೊಂದಿರುವ ಹಾಗೂ ಈ ಪ್ರಕರಣದ ಪ್ರಮುಖ ಆರೋಪಿ ಉಣ್ಣಿ ಕೃಷ್ಣನ್ ಪೋತ್ತಿಯೊಂದಿಗೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಗಣ್ಯರು ನಿಕಟ ಸಂಪರ್ಕ ಹೊಂದಿದ್ದು, ಇದು ಭಾರೀ ನಿಗೂಢತೆಗೂ ದಾರಿಮಾಡಿ ಕೊಟ್ಟಿದ್ದು ಅದನ್ನು ಬೇಧಿಸಲು ಈ ಪ್ರಕರಣದ ತನಿಖೆಯನ್ನು ಎಸ್‌ಎಟಿ ಈ ಮೂರು ರಾಜ್ಯಗಳಿಗೂ ವಿಸ್ತರಿಸಿದೆ. ಈ ಪ್ರಕರಣದ ತನಿಖೆ ಆರಂಭಗೊಂಡು 20 ದಿನ ಕಳೆದರೂ ಶಬರಿಮಲೆ ದೇಗುಲದಿಂದ ಕದ್ದು ಸಾಗಿಸಿದ ಚಿನ್ನವನ್ನು ಪತ್ತೆಹಚ್ಚಿ ವಶಪಡಿಸಲು ತನಿಖಾ ತಂಡಕ್ಕೆ ಇನೂ ಸಾಧ್ಯವಾಗಿಲ್ಲ. ಮಾತ್ರವಲ್ಲ ಇದರ ತನಿಖೆಯನ್ನು ಈಗ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಯನ್ನು ಮಾತ್ರವೇ ಕೇಂದ್ರೀಕರಿಸಿ ನಡೆಸಲಾಗುತ್ತಿದ್ದು, ಈ ಪ್ರಕರ ಣದ ಇತರ ಆರೋಪಿಗಳನ್ನು ವಿಚಾರಣೆಗೊಳಿಸುವತ್ತ ತನಿಖಾ ತಂಡ ಇನ್ನೂ ಸಾಗಿಲ್ಲ.  ಇದು ಭಾರೀ ಶಂಕೆಗೂ ದಾರಿಮಾಡತೊಡಗಿದೆ. ಈ  ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಉಣ್ಣಿಕೃಷ್ಣನ್ ಪೋತ್ತಿ ತಿರುವನಂತಪುರ ವೆಂಙಾರಮೂಡು ಪುಳಿಮಾತ್ತಿನ ಮನೆಯಲ್ಲಿ ತನಿಖಾ ತಂಡ ಪರಿಶೀಲನೆ ನಡೆಸಿದ್ದು ಅಲ್ಲಿಂದ ಚಿನ್ನದೊಡವೆ ಹಾಗೂ ನಾಣ್ಯಗಳು  ಇತರ ವ್ಯಕ್ತಿಗಳ ಹಲವು ದಾಖಲು ಪತ್ರಗಳು, ಆರ್ಥಿಕ ವ್ಯವಹಾರ ಕುರಿತಾದ ದಾಖಲು ಪತ್ರಗಳನ್ನು ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಆರೋಪಿ ಚಿಲ್ಲರೆ ಸಾಲ ನೀಡುವ ವ್ಯವಹಾರವನ್ನು ಇನ್ನೊಂದೆಡೆ ನಡೆಸುತ್ತಿದೆಯೆಂಬ ಶಂಕೆಯನ್ನು  ತನಿಖಾ ತಂಡ ವ್ಯಕ್ತಪಡಿಸಿದೆ.

RELATED NEWS

You cannot copy contents of this page