ಪರಿಚಯಗೊಂಡ 14ರ ಹರೆಯದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ: ಮಲಪ್ಪುರಂ ನಿವಾಸಿ ಸೆರೆ

ಕಾಸರಗೋಡು: ಪರಿಚಯಗೊಂಡ ಬಾಲಕಿಯನ್ನು ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಮಲಪ್ಪುರಂ ನಿವಾಸಿಯಾ ಗಿರುವ ಆರೋಪಿಯನ್ನು ಕಾಸರಗೋ ಡು ಪೊಲೀಸರು ಬಂಧಿಸಿದ್ದಾರೆ.

ಮಲಪ್ಪುರಂ ನಿವಾಸಿ ಹಾಗೂ ಗಲ್ಪ್ ಉದ್ಯೋಗಿ ಇಜಾಸ್ ಅಹಮ್ಮದ್ (20) ಬಂಧಿತ ಆರೋಪಿ. ಈತ ಇತ್ತೀಚೆಗೆ  ಹೊಸದುರ್ಗಕ್ಕೆ ಬಂದಿದ್ದನು. ಅಲ್ಲಿ ಆತ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 14ರ ಹರೆಯದ ಬಾಲಕಿಯೋರ್ವಳನ್ನು ಪರಿಚಯಗೊಂಡು ಆಕೆಯ ಮೊಬೈಲ್ ನಂಬ್ರವನ್ನು ಕೇಳಿ ಪಡೆದಿದ್ದನು. ನಂತರ ಆತ ನಿರಂತರವಾಗಿ ಬಾಲಕಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಪರಿಚಯ ದಿಂದ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ನಂತರ ಆರೋಪಿ ಗಲ್ಫ್‌ಗೆ ಹೋಗಿದ್ದನು. ಆ ಬಗ್ಗೆ ಬಾಲಕ ನೀಡಿದ ದೂರಿನಂತೆ ಆರೋಪಿಯ ವಿರುದ್ಧ ಕಾಸರಗೋಡು ಪೊಲೀಸರು ಪೋಕ್ಸೋ  ಪ್ರಕರಣ ದಾಖಲಿಸಿಕೊಂಡಿದ್ದರು. ಆ ಮಧ್ಯೆ ಆರೋಪಿ ಗಲ್ಫ್‌ನಿಂದ ಹಿಂತಿರುಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

RELATED NEWS

You cannot copy contents of this page