ಚುನಾವಣೆ ಸಮೀಪಿಸುತ್ತಿದ್ದಂತೆ ಮುಸ್ಲಿಂ ಲೀಗ್‌ನಿಂದ ಕೋಮು ಗಲಭೆ ಪ್ರಚೋದನೆ ಯತ್ನ- ಒಬಿಸಿ ಮೋರ್ಚಾ

ಕುಂಬಳೆ: ಶಾಲಾ ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷವನ್ನು ತುಂಬುವ ಮೂಲಕ ಮುಸ್ಲಿಂ ಲೀಗ್ ಮತ ಬ್ಯಾಂಕ್ ರಚಿಸಲು ಪ್ರಯತ್ನಿಸುತ್ತಿದೆ ಎಂದು ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಆರೋಪಿಸಿದರು. ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿಯ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ಯಾಲೆಸ್ತಿನ್‌ಗೆ ಸಂಬAಧಿಸಿದ ವಿಷಯಗಳಲ್ಲಿ ಬೆಂಬಲ ಘೋಷಿಸಿದ ಮಂಜೇಶ್ವರ ಶಾಸಕರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಹೆಸರಿಗೆ ಧಾರ್ಮಿಕ ಸಾಮರಸ್ಯ, ಕೋಮುವಾದವನ್ನು ಪ್ರಚೋದಿಸುವ ಮೂಲಕ ಮತಗಳನ್ನು ಗಳಿಸುವ ಗುರಿಯನ್ನು ಹೊಂದಿರುವ ಮುಸ್ಲಿಂ ಲೀಗ್‌ನ ಇಂತಹ ಕಾರ್ಯಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಒಬಿಸಿ ಮೋರ್ಚಾ ಬಲವಾದ ಪ್ರತಿಭಟನಾ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಅವರು ಹೇಳಿದರು.
ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಮಾತನಾಡಿದರು. ಉಪಾಧ್ಯಕ್ಷರಾದ ಗಿರಿಧರ್ ವೀರನಗರ, ದಿನೇಶ್ ಮುಳಿಂಜ, ಕಾರ್ಯದರ್ಶಿಗಳಾದ ಚಂದ್ರಶೇಖರ್, ಅಭಿಷೇಕ್, ಖಜಾಂಚಿ ಅಭಿಲಾಷ್ ಪೇರಾಲ್, ಸದಸ್ಯರಾದ ಜಯರಾಜ್ ಎಸ್.ಆರ್, ಆನಂದ್ ಕಿದೂರು, ಜಯಪ್ರಕಾಶ್ ಎ. ಒಬಿಸಿ ಮೋ ರ್ಚಾದ ಮುಂಬರುವ ಕಾರ್ಯ ಕ್ರಮಗಳ ಕುರಿತು ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಶೇಣಿ ಸ್ವಾಗತಿಸಿ, ಅಶೋಕ್ ಪೆರ್ಮುದೆ ವಂದಿಸಿದರು.

You cannot copy contents of this page