ಮಂಗಳೂರು: ವಿಶ್ವಾಸ ಹಾಗೂ ಪರಂಪರೆಯೊಂದಿಗೆ ಜನರ ಹೃದಯದಲ್ಲಿ ಸ್ಥಾನ ಗಳಿಸಿದ ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರು ಬೆಂದೂರ್ವೆಲ್ನಲ್ಲಿ ಕಾರ್ಯಾರಂಭ ಗೊಂಡಿದೆ. ನೂತನ ಜ್ಯುವೆಲ್ಲರಿ ಶೋರೂಂನ ಉದ್ಘಾಟನೆಯನ್ನು ಸಿನಿಮಾ ನಟಿ ಸ್ನೇಹಾ ಪ್ರಸನ್ನ ನಿರ್ವಹಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಸಿಟಿ ಸೌತ್ ಶಾಸಕ ಡಿ. ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಕರ್ನಾಟಕ ಸ್ಟೇಟ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್, ರೆವರೆಂಡ್ ಡಾ. ಪ್ರವೀಣ್ ಮಾರ್ಟೀಸ್ ಎಸ್.ಜೆ, ಸ್ವಾಮಿ ಯುಗೇಶಾನಂದಜಿ, ಕೆಸಿಸಿಐ ಅಧ್ಯಕ್ಷ ಮಿಥುನ್ ಎಂ. ರೈ, ಪಿ.ಬಿ. ಅಹಮ್ಮದ್ ಮುದಸ್ಸರಲ್ ಮೊದಲಾದವರು ಅತಿಥಿ ಗಳಾಗಿ ಭಾಗವಹಿಸಿದರು. ಕಲೆ, ಸಾಂಸ್ಕೃ ತಿಕ, ರಾಜಕೀಯ, ಸಾಮಾಜಿಕ ರಂಗದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಬಿಂದು ಜ್ಯುವೆಲ್ಲರಿ ಆವಿಷ್ಕರಿಸುವ ‘ಮೈ ಬ್ಲೂ ಡೈಮಂಡ್’, ‘ಸ್ವರ್ಣ ಬಿಂದು ಸಿಎಸ್ಆರ್’ ಎಂಬಿವುಗಳ ಲಾಂಛನವನ್ನು ಬಿಡುಗಡೆಗೊಳಿಸಲಾ ಯಿತು. ದಿ| ಕೆ.ವಿ. ಕುಂಞಿಕಣ್ಣನ್ ಶುದ್ಧವಾದ ಆಭರಣ ಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕಾಗಿ ೧೯೮೨ರಲ್ಲಿ ಬಿಂದು ಜ್ಯುವೆಲ್ಲರಿಗೆ ನಾಂದಿ ಹಾಡಿದ್ದರು. ಆ ಕಿರು ಆರಂಭದಿಂದಾಗಿ ಇಂದು ಕೇರಳದಲ್ಲೂ, ಕರ್ನಾಟಕದಲ್ಲೂ ಪ್ರಸಿದ್ಧವಾದ ಜ್ಯುವೆಲ್ಲರಿ ಬ್ರಾಂಡ್ ಆಗಿ ಬಿಂದು ಜ್ಯುವೆಲ್ಲರಿ ತಿಳಿಯ ಲ್ಪಡುತ್ತಿದೆ. ಈ ಸಂಸ್ಥೆಗೆ ಈಗ ಅವರ ಮಕ್ಕ ಳಾದ ಅಭಿಲಾಷ್ ಕೆ.ವಿ, ಡಾ. ಅಜಿತೇಶ್ ಕೆ.ವಿ. ನೇತೃತ್ವ ನೀಡುತ್ತಿದ್ದಾರೆ. ಅತ್ಯಂತ ವೈವಿದ್ಯಮಯ ಆಭರಣಗಳನ್ನು ಕನಿಷ್ಠ ಮಜೂರಿಯಲ್ಲಿ ನೀಡುವ ದಶಕಗಳ ಪರಂ ಪರೆ ಬಿಂದು ಜ್ಯುವೆಲ್ಲರಿಯನ್ನು ಜನಪ್ರಿಯ ಗೊಳಿಸಿದ ಪ್ರಧಾನ ಘಟಕಗಳಾಗಿವೆ.
ಮಂಗಳೂರಿನಲ್ಲಿ ಗ್ರಾಹಕರಿಗಾಗಿ ಸೂಕ್ತವಾದ ಆಭರಣಗಳು ಹಾಗೂ ಉತ್ತಮ ಡಿಸೈನ್ ಪ್ರಸ್ತುತಪಡಿಸಲು ಬಿಂದು ಜ್ಯುವೆ ಲ್ಲರಿ ಉದ್ದೇಶಿಸಿದೆ ಎಂದು ಮೆನೇಜಿಂಗ್ ಡೈರೆಕ್ಟರ್ ಅಭಿಲಾಷ್ ತಿಳಿಸಿದ್ದಾರೆ.