ಕ್ಷೇಮ ಪಿಂಚಣಿ 1800 ರೂ.ಗೇರಿಸಲು  ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಕ್ಷೇಮಪಿಂಚಣಿ ಹೆಚ್ಚಿಸಲು ಚಿಂತಿಸಲಾಗಿದೆ. ೨೦೦ ರೂ. ಹೆಚ್ಚಿಸಲಿರುವ ನಿರ್ದೇಶ ವಿತ್ತಖಾತೆಯ ಪರಿಗಣನೆಯಲ್ಲಿದೆ. 1800 ರೂ.ಗೇರಿಸಲು ಈಗ ಆಲೋಚಿಸಲಾ ಗುತ್ತಿದೆ. ಸ್ಥಳೀಯಾಡಳಿತ ಚುನಾವಣೆಯ ಮುಂಚಿತವಾಗಿ ಈ ತೀರ್ಮಾನ ಉಂಟಾಗಬಹುದೆಂದು ಮಾಹಿತಿಯಿದೆ. ಪ್ರಥಮ ಪಿಣರಾಯಿ ವಿಜಯನ್ ಸರಕಾರದ ಕೊನೆಯ ಹಂತದಲ್ಲಿ 2021ರಲ್ಲಿ  ಅಂತಿಮವಾಗಿ ಪಿಂಚಣಿ ಹೆಚ್ಚಿಸಿ 1600 ರೂ. ಮಾಡಲಾಗಿತ್ತು. ಪಿಂಚಣಿ 2500 ರೂ.ವನ್ನಾಗಿ ಮಾಡುವುದಾಗಿ ಎಡರಂಗ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ 1800 ರೂ. ಎಂಬ ಘೋಷಣೆ ಕೂಡಲೇ ಉಂಟಾಗಲಿದೆ. ರಾಜ್ಯ ತೀವ್ರ ಆರ್ಥಿಕ ಸಂದಿಗ್ಧತೆಯ ಮೂಲಕ ಸಾಗುತ್ತಿರುವ ಸನ್ನಿವೇಶದಲ್ಲಿ ಈ ರೀತಿಯ ತೀರ್ಮಾನಕ್ಕೆ ಸರಕಾರ ಕೈಹಾಕಲಿದೆ. ಕೇರಳ ರಾಜ್ಯೋದಯ ದಿನದಂದು ಕೆಲವು ನಿರ್ಣಾಯಕ ಘೋಷಣೆಗಳು ಉಂಟಾ ಗಲಿದೆ ಎಂದು ಸರಕಾರಿ ಮೂಲಗಳು ಸೂಚನೆ ನೀಡುತ್ತಿವೆ. ರಾಜ್ಯದಲ್ಲಿ ೬೦ ಲಕ್ಷದಷ್ಟು ಮಂದಿ ಕ್ಷೇಮ ಪಿಂಚಣಿ ಪಡೆಯುತ್ತಿದ್ದಾರೆ. ಒಂದು ತಿಂಗಳ ಪಿಂಚಣಿ ಇನ್ನೂ ಬಾಕಿ ಉಳಿದಿದೆ. ಸರಕಾರಿ ನೌಕರರ ವೇತನ ಪರಿಷ್ಕರಣೆಯಲ್ಲೂ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ವಿಷಯದಲ್ಲೂ ನಿರ್ಣಾಯಕ ಘೋಷಣೆ ಉಂಟಾಗಲಿದೆ ಎಂಬ ಸೂಚನೆಯಿದೆ. ಸರಕಾರಿ ನೌಕರರ ಬಾಕಿ ಇರುವ ಡಿಎ ಕೂಡಾ ನೀಡುವ ಸಾಧ್ಯತೆ ಇದೆ.

You cannot copy contents of this page