ಆರಿಕ್ಕಾಡಿ ಟೋಲ್ ಬೂತ್‌ನಲ್ಲಿ ವಾಹನ ನಿಯಂತ್ರಣ, ಹಂಪ್ ನಿರ್ಮಾಣ: ನಾಗರಿಕರಿಂದ ಪ್ರತಿಭಟನೆ

ಕುಂಬಳೆ: ಆರಿಕ್ಕಾಡಿ ಟೋಲ್ ಬೂತ್ ನಿರ್ಮಾಣದ ಹೆಸರಲ್ಲಿ ರಸ್ತೆಗೆ ತಡೆಯೊಡ್ಡಿ ಟೋಲ್ ಬೂತ್‌ನ ಎರಡೂ ಭಾಗದಲ್ಲಿ ಹಂಪ್‌ಗಳನ್ನು ಸ್ಥಾಪಿಸಿದ್ದು, ಅದರಿಂದ ಆಂಬುಲೆನ್ಸ್ ಸಹಿತ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿ ರುವುದರಿಂದ ಕ್ರಿಯಾ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ನಿನ್ನೆ ನಾಗರಿಕರು ರಸ್ತೆ ತಡೆಯಲಿರುವ ಕಾಮಗಾರಿಗೆ ತಡೆಯೊಡ್ಡಿದ್ದಾರೆ.  ವಾಹನ ಸಂಚಾರಕ್ಕೆ ತಡೆಯೊಡ್ಡಲು ಇರಿಸಿದ್ದ ಅಡಚಣೆಗಳನ್ನು ನಾಗರಿಕರು ತೆರವು ಗೊಳಿಸಿದ್ದಾರೆ. ಈ ವೇಳೆ ಗುತ್ತಿಗೆ ಕಂಪೆನಿ ನೌಕರರು ಹಾಗೂ ಚಳವಳಿಗಾರರ ಮಧ್ಯೆ ವಾಗ್ವಾದ ನಡೆಯಿತು. ವಿಷಯ ತಿಳಿದು ತಲುಪಿದ ಪೊಲೀಸರು ಎರಡೂ ತಂಡಗಳನ್ನು ಚದುರಿಸಿದರು. ರಸ್ತೆಗೆ ತಡೆಯೊಡ್ಡಿರುವುದನ್ನು ಶೀಘ್ರ ತೆರವುಗೊಳಿಸಿ ಮುಚ್ಚುಗಡೆಗೊಳಿಸಿದ ಎರಡೂ ರಸ್ತೆಗಳನ್ನು ಸಂಜೆ ವೇಳೆಗೆ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದು ಇದರಂತೆ ನಿರ್ಮಿಸಿದ್ದ ಹಂಪ್‌ಗಳನ್ನು ತೆರವುಗೊಳಸಲಾ ಯಿತು. ಟೋಲ್ ಸಂಗ್ರಹ ಆರಂಭಿಸುವಾಗ ಅಗತ್ಯವಿದ್ದರೆ ಹಂಪ್ ನಿರ್ಮಿಸಲಿ ಎಂಬ ಮುಷ್ಕರ ಸಮಿತಿಯ ನಿರ್ದೇಶ ಪ್ರಕಾರ ಹಂಪ್‌ಗಳನ್ನು ತೆರವುಗೊಳಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಮೂರು ರಸ್ತೆಗಳ ಪೈಕಿ ಎರಡನ್ನು ಮುಚ್ಚುಗಡೆಗೊಳಿಸಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂದಣಿ ತೀವ್ರಗೊಂಡಿರುವುದು ನಾಗರಿಕರನ್ನು ರೋಷಗೊಳ್ಳುವಂತೆ ಮಾಡಿದೆ. ಮುಷ್ಕರ ಸಮಿತಿ ನೇತಾರರಾದ ಎ.ಕೆ.ಆರಿಫ್, ಅಶ್ರಫ್ ಕಾಳ, ಸಿ.ಎ. ಸುಬೈರ್ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.

You cannot copy contents of this page