ಕಾಸರಗೋಡು: ಮೀನು ಹಿಡಿಯುತ್ತಿದ್ದ ವೇಳೆ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಬೆಸ್ತನ ಮೃತದೇಹ ಪತ್ತೆಯಾಗಿದೆ. ತೃಕ್ಕರಿಪುರ ಸಮೀಪದ ವಲಿಯಪರಂಬ ಸೇತುವೆ ಬಳಿ ನಿವಾಸಿ ಎನ್.ವಿ. ತಂಬಾನ್ (63) ನಾಪತ್ತೆಯಾದ ವ್ಯಕ್ತಿ. ಇವರು ಕಳೆದ ಭಾನುವಾರ ಬೆಳಿಗ್ಗೆ ವಲಿಯಪರಂಬ ಸೇತುವೆ ಬಳಿ ಹೊಳೆಯಿಂದ ಮೀನು ಹಿಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದರು.
ಊರವರು, ಅಗ್ನಿಶಾಮಕದಳ ವ್ಯಾಪಕ ಶೋಧ ನಡೆಸಿದ್ದು ಈ ಮಧ್ಯೆ ನಿನ್ನೆ ಅಲ್ಲೇ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ. ಚಂದೇರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ನಂತರ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು.
ಮೀನು ಕಾರ್ಮಿಕ ಯೂನಿಯನ್ (ಸಿಐಟಿಯು)ನ ವಲಿಯಪರಂಬ ಘಟಕದ ಅಧ್ಯಕ್ಷರು ಹಾಗೂ ಸಿಪಿಎಂ ಕಾರ್ಯಕರ್ತರೂ ಆಗಿರುವ ಮೃತ ತಂಬಾನ್ ಪತ್ನಿ ಶ್ಯಾಮಲ, ಮಕ್ಕಳಾದ ಎಂ.ಅಂಜಲಿ, ಎಂ. ರಂಜಿತ್, ಸಹೋದರ-ಸಹೋದರಿಯರಾದ ಜನಾರ್ದನನ್.