ಕಾಸರಗೋಡು: ರಬ್ಬರ್ ಮರ ಕಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮರ ಕಡಿಯುವ ಕಾರ್ಮಿಕ ವೆಳ್ಳರಿಕುಂಡು ನಾಟುಕ್ಕಲ್ಲಿನ ಪುಲಿಕೋಡನ್ ವಿಜಯನ್ (56) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ಅಲ್ಲೇ ಪಕ್ಕದ ರಬ್ಬರ್ ಮರದ ರೆಂಬೆಗಳನ್ನು ಕಡಿಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ದಿವಂಗತರಾದ ಕಾಮಲತ್ ಕೃಷ್ಣನ್-ಕಮ್ಮಾಡತ್ತ್ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಲಕ್ಮಿ, ಮಕ್ಕಳಾದ ವಿಜಯಶ್ರೀ, ವಿಶಾಖ್,ಅಳಿಯ ಹರೀಶ್ ಬಂಗಳಂ, ಸಹೋದರರಾದ ಕುಮಾರನ್, ಬಾಲನ್, ತಂಬಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
