ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಾರಾ ಟಕ್ಕಿರಿಸಿದ್ದ ಪಟಾಕಿಗಳನ್ನು ಮಂ ಜೇಶ್ವರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಮಂಜೇಶ್ವರ ಮಿತ್ತಕನಿಲದ ಭರತ್ (36) ವಿರುದ್ಧ ಕೇಸು ದಾಖಲಿಸ ಲಾಗಿದೆ. ನಿನ್ನೆ ಸಂಜೆ ಹೊಸಂ ಗಡಿಯ ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಮಾರಾಟ ನಡೆಯುತ್ತಿರು ವುದರ ಬಗ್ಗೆ ಮಾಹಿತಿ ಲಭಿಸಿದ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಚೈನೀಸ್ ಪಟಾಕಿ ಸೇರಿ 37 ವಿಧದ ಪಟಾಕಿ ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
