ಸೂರಂಬೈಲು : ಕುಂಬಳೆ ಉಪಜಿಲ್ಲಾ ಮಟ್ಟದ ಗಣಿತ ಮೇಳ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್ ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ಸದಸ್ಯೆ ಅನಿತಾಶ್ರೀ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಜಯಂತಿ, ಕುಂಬಳೆ ಎಚ್ ಎಂ ಫಾರಂ ಕಾರ್ಯದರ್ಶಿ ಸುರೇಂದ್ರನ್ ಎಂ ವಿ, ಪಿಟಿಎ ಅಧ್ಯಕ್ಷ ಮೊಯಿದು ಸೀತಾಂಗೋಳಿ, ಎಂಪಿಟಿಎ ಅಧ್ಯಕ್ಷೆ ರಾಜಿ ರಾಜೇಶ್, ಪಿಟಿಎ ಉಪಾಧ್ಯಕ್ಷ ರಮೇಶ್ ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುಜುಂಗಾವು, ಸುಲೈಮಾನ್ ಊಜಂಪದವು, ಸುನಿಲ್ ಅನಂತಪುರ, ಸ್ಟಾಫ್ ಸೆಕ್ರೆಟರಿ ಕಿರಣ್ ಕೆ, ಹಿರಿಯ ಶಿಕ್ಷಕಿ ದೇವಿಕರಾಣಿ ಕೆ.ಎಸ್. ಶುಭಾಶಂಸನೆಗೈದರು. ಮುಖ್ಯ ಶಿಕ್ಷಕಿ ಸುನೀತ ಎ ಸ್ವಾಗತಿಸಿ, ಉಪಜಿಲ್ಲಾ ಗಣಿತ ಕ್ಲಬ್ ಕಾರ್ಯದರ್ಶಿ ರಾಧಾಕೃಷ್ಣ ವಂದಿಸಿದರು. ಶರತ್ ಕುಮಾರ್ ನಿರ್ವಹಿಸಿದರು.
ಅಮೃತ, ಶ್ರದ್ಧಾ ಪ್ರಾರ್ಥನೆ ಹಾಡಿದರು. ಕುಂಬಳೆ ಉಪಜಿಲ್ಲಾ ವ್ಯಾಪ್ತಿಯ ಶಾಲೆಗಳಿಂದ ಸುಮಾರು 850ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ ಗಳು, ಶಿಕ್ಷಕರು ಭಾಗವಹಿಸಿದರು. ಪುತ್ತಿಗೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಹಸಿರು ಕ್ರಿಯÁ ಸೇನೆಯ ಕಾರ್ಯಕರ್ತೆಯರು ಸಹಕರಿಸಿದರು.
