ಹೊಸದುರ್ಗ: ಕೋಟ್ಟಪ್ಪುರಂ ಇಎಂಎಸ್ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲಾ ಕರಾಟೆ ಡೋ ಅಸೋಸಿಯೇಶನ್ ಹಮ್ಮಿಕೊಂಡ ಹದಿಮೂರನೇ ಜಿಲ್ಲಾ ಕರಾಟೆ ಚಾಂಪ್ಯನ್‌ಶಿಪ್‌ನಲ್ಲಿ ಎರಡನೇ ತರಗತಿ ವಿದ್ಯಾರ್ಥಿ ಗೆಲುವು ಸಾಧಿಸಿದ್ದಾನೆ. ನೀಲೇಶ್ವರ ಪಾಲಕ್ಕಾಡ್‌ನ ಆರುಶ್ ಶ್ರೀರಾಜ್ ಈ ಸಾಧನೆಗೈದಿದ್ದಾನೆ.
25 ಕಿಲೋ ಕುಮಿಟೆ ವಿಭಾಗದಲ್ಲಿ ಆರುಶ್ ಶ್ರೀರಾಜ್‌ಗೆ ಚಿನ್ನದ ಪದಕ ಲಭಿಸಿದೆ. ಜಿಲ್ಲೆಯ ವಿವಿಧ ಭಾಗಗಳಿಂದಾಗಿ ೩೫೦ರಷ್ಟು ಮಂದಿ ಸ್ಪರ್ಧಾಳುಗಳು ಚಾಂಪ್ಯನ್ ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ನವಂಬರ್ ೧೫,೧೬ರಂದು ಎರ್ನಾಕುಳಂ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುವ ಕರಾಟೆ ಕೇರಳ ಅಸೋಸಿಯೇಶನ್ ರಾಜ್ಯ ಚಾಂಪ್ಯನ್ ಶಿಪ್‌ಗಿರುವ ಜಿಲ್ಲಾ ತಂಡಕ್ಕೆ ಆರುಶ್‌ನನ್ನು ಆರಿಸಲಾಗಿದೆ.ಕೆ.ವಿ. ಶ್ರೀರಾಜ್-ಟಿ.ಐಶ್ವರ್ಯ ದಂಪತಿ ಪುತ್ರನಾದ ಆರುಶ್ ನೀಲೇಶ್ವರ ಸೈಂ ಟ್ ಪೀಟರ್ಸ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.