ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಕುಟುಂಬಾರೋಗ್ಯ ಕೇಂದ್ರಕ್ಕೆ ಎಂಟೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಟ್ಟಡ ಸಮುಚ್ಛಯಕ್ಕೆ ಶಿಲಾನ್ಯಾಸ ನಡೆಸಲಾಯಿತು. ಕೇಂದ್ರ ಸರಕಾರದ ದೇಶೀಯ ಹೆಲ್ತ್ ಮಿಶನ್ನಿಂದ 4.74 ಕೋಟಿ ರೂ., ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ನಿಂದ 3.84 ಕೋಟಿ ರೂ. ಉಪಯೋಗಿಸಿ ಎರಡು ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಆದ್ರಂ ಗುಣಮಟ್ಟದಲ್ಲಿರುವ ಹೊಸ ಕಟ್ಟಡ ಸಮುಚ್ಛಯದಲ್ಲಿ 6 ಒಪಿ ಕೊಠಡಿಗಳು, ನೋಂದಾವಣೆ ಕೌಂಟರ್, ರೋಗಿಗಳಿಗಿರುವ ಕಾಯುವಿಕೆ ಕೇಂದ್ರ, ಪ್ರಿಚೆಕ್ಕಿಂಗ್ ರೂಂ, ನರ್ಸಿಂಗ್ ಸ್ಟೇಶನ್, ಮೈನರ್ ಒ.ಟಿ, ಫೀಡಿಂಗ್ ರೂಂ, ಕಚೇರಿ, ಡೆಂಟಲ್ ಒಪಿ, ಕಾನ್ಫರೆನ್ಸ್ ಹಾಲ್, ಫಾರ್ಮಸಿ ರೂಂ, ಲ್ಯಾಬೋರೇಟರಿ, ಫಿಸಿಯೋಥೆರಾಫಿ, ಇಮ್ಯುನೈಸೇಶನ್, ಪಬ್ಲಿಕ್ ಹೆಲ್ತ್ ಟೀಂ ಕೊಠಡಿಗಳು,30 ಹಾಸಿಗೆಗಳಿರುವ ವಾರ್ಡ್ಗಳು, 3 ಲಿಫ್ಟ್ಗಳು ಎಂಬೀ ಸೌಕರ್ಯಗಳನ್ನು ಏರ್ಪಡಿಸಲಾಗು ವುದು. ಅಲ್ಲದೆ ಡಯಾಸಿಸ್ ಸೌಕರ್ಯ ಸೇರಿಸಿಕೊಳ್ಳಬಹುದಾದ ರೀತಿಯಲ್ಲಿ ಕಟ್ಟಡಕ್ಕೆ ರೂಪು ನೀಡಲಾಗಿದೆ. ಕಟ್ಟಡಗಳ ನಿರ್ಮಾಣಕ್ಕೆ ಸಚಿವೆ ವೀಣಾ ಜೋರ್ಜ್ ಆನ್ಲೈನ್ ಆಗಿಯೂ, ಎಕೆಎಂ ಅಶ್ರಫ್ ನೇರ ವಾಗಿಯೂ ಶಿಲಾನ್ಯಾಸಗೈದಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ, ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ಬ್ಲಾಕ್ ಉಪಾಧ್ಯಕ್ಷ ಪಿ.ಕೆ. ಮುಹಮ್ಮದ್ ಹನೀಫ್, ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಬ್ಲೋಕ್ ಸ್ಥಾಯೀ ಸಮಿತಿ ಅಧ್ಯಕ್ಷೆ ಶಮೀನ, ಸದಸ್ಯರಾದ ಎನ್. ಅಬ್ದುಲ್ ಹಮೀದ್, ಸರೋಜಾ ಆರ್ ಬಲ್ಲಾಳ್, ಸುಪ್ರಿಯಾ ಶೆಣೈ, ಶಫ ಫಾರೂಕ್, ಮೊಯ್ದೀನ್ ಕುಂಞಿ, ಚಂದ್ರಾವತಿ ಟಿ.ಎನ್, ಅನಿಲ್ ಕುಮಾರ್, ಕೆ. ಬಟ್ಟು ಶೆಟ್ಟಿ, ಚಂದ್ರಾವತಿ ಎಂ, ಫಾತಿಮತ್ ಸುಹರಾ, ಕೆ. ಅಶೋಕ, ರಾಧಾಕೃಷ್ಣ ಕೆ.ವಿ, ಅಶ್ವಿನಿ ಎಂ.ಎಲ್, ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಡಾ| ಅಶೋಕ್, ಡಾ| ಪ್ರಭಾಕರ್ ರೈ ಮಾತನಾಡಿದರು.
