ಕಾಸರಗೋಡು: ರೇಶನ್ ವ್ಯಾಪಾರಿಗಳ ವೇತನವನ್ನು ಸಮ ಯೋಚಿತ ರೀತಿಯಲ್ಲಿ ಹೆಚ್ಚಿಸಬೇಕು, ಕೇರಳ ಪಡಿತರ ಕಾನೂನಿನ ಲೋಪ ದೋಷಗಳನ್ನು ಪರಿಹರಿಸಬೇಕು, ರೇಶನ್ ವ್ಯಾಪಾರಿಗಳ ಕಲ್ಯಾಣ ನಿಧಿಯಲ್ಲಿ ಸರಕಾರದ ಪಾಲನ್ನು ಪುನಃ ಸ್ಥಾಪಿಸಬೇಕು ಅದಕ್ಕೆ ತಯಾರಾಗ ದಿದದಲ್ಲಿ ವ್ಯಾಪಾರಿಗಳಿಂದ ಈತನಕ ಸ್ವೀಕರಿಸಲಾದ ಹಣವನ್ನು ಅವರಿಗೆ ಹಿಂತಿರುಗಿಸಬೇಕು, ರೇಶನ್ ವ್ಯಾಪಾರಿಗಳನ್ನು ಮೆಡಿಸೆಪ್ ಯೋಜನೆಯಲ್ಲಿ ಒಳಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ರಾಜ್ಯ ರೂಪೀಕರಣ ದಿನವಾದ ನವಂಬರ್ 1ರಂದು ತಾಲೂಕು ಕೇಂದ್ರಗಳಲ್ಲಿ ಮಾರ್ಚ್ ಮತ್ತು ಧರಣಿ ಮುಷ್ಕರ ಹೂಡಲು ರೇಶನ್ ವ್ಯಾಪಾರಿಗಳ ಸಂಘಟನೆ ತೀರ್ಮಾನಿಸಿದೆ.
ಎಕೆಆರ್‌ಆರ್‌ಡಿಎ ಭವನದಲ್ಲಿ ನಡೆದ ರೇಶನ್ ವ್ಯಾಪಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಮೊಹಮ್ಮದಾಲಿ ಸಭೆಯನ್ನು ಉದ್ಘಾಟಿಸಿದರು.