ನಿಯಂತ್ರಣ ತಪ್ಪಿ ಬಿದ್ದ ಬೈಕ್‌ನ ಮೇಲೆ ಬಸ್ ಹರಿದು ಸವಾರ ಮೃತ್ಯು

ಕಾಸರಗೋಡು: ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ ಅದರ ಮೇಲೆ ಬಸ್ ಹರಿದು ಸವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಪಾಲಕುನ್ನು ಏರೋಲ್ ಚಂದ್ರಾಪುರದ ವಿಶ್ವನಾಥನ್- ಯು.ಕೆ. ಸಜನಿ ದಂಪತಿ ಪುತ್ರ ವಿಷ್ಣು (29) ಸಾವನ್ನಪ್ಪಿದ ದುರ್ದೈವಿ.

ಕೂತುಪರಂಬ- ತಲಶ್ಶೇರಿ ರಸ್ತೆ ನಗರಸಭಾ ಕಚೇರಿಯ ಎದುರುಗಡೆ ನಿನ್ನೆ ಈ ದುರ್ಘಟನೆ ನಡೆದಿದೆ. ಕೂತುಪರಂಬದ ಪಾರಾಲಿಲ್‌ನ ಆರ್‌ಸಿಬಿ ಗ್ರೂಪ್ ಸಂಸ್ಥೆಯಲ್ಲಿ ದುಡಿಯುತ್ತಿರುವ ವಿಷ್ಣು ಆ ಸಂಸ್ಥೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಕ್ಷೌರ ನಡೆಸಲೆಂದು ಅವರು ನಿನ್ನೆ ಸಂಜೆ ಬೈಕ್‌ನಲ್ಲಿ ಪಾಲಾಲಿಗೆ ಹೋಗುತ್ತಿದ್ದ ದಾರಿ ಮಧ್ಯೆ ಬೈಕ್ ಮಳೆಗೆ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಆ ವೇಳೆ ಕೂತುಪರಂಬ ಭಾಗದಿಂದ ಬರುತ್ತಿದ್ದ ಬಸ್ ರಸ್ತೆಯಲ್ಲಿ ಬಿದ್ದಿದ್ದ ವಿಷ್ಣುರ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಕೂತುಪರಂಬ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ನಂತರ ತಲಶೇರಿ ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳ ಪಡಿಸಲಾಯಿತು.

RELATED NEWS

You cannot copy contents of this page