ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿ ಯಾಟ್ ತಿರುವಳ್ಳೂರು ಶಿವ ಕ್ಷೇತ್ರ ಬಳಿಯ ಮನೆಯಿಂದ ಐದೂವರೆ ಪವನ್ ಚಿನ್ನಾಭರಣ ಕಳವಿಗೀಡಾಗಿದೆ. ಕಳೆದ ಗುರುವಾರದಿಂದ ಮಂಗಳವಾರದ ಮಧ್ಯೆ ಕಳವು ನಡೆದಿರುವುದಾಗಿ ಮನೆ ಮಾಲಕ ಸಿ.ಎಂ. ರವೀಂದ್ರನ್ ಚಂದೇರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸೂಟ್ ಕೇಸ್ನಲ್ಲಿ ಇರಿಸಿದ್ದ ಮೂರು ಬಳೆಗಳ ಸಹಿತ ಚಿನ್ನವನ್ನು ಕಳ್ಳರು ದೋಚಿದ್ದಾರೆ.ಈ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
