ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ: ಮಾಜಿ ಅಡ್ಮಿನಿಸ್ಟ್ರೇಟಿವ್ ಅಧಿಕಾರಿ ಮುರಾರಿಬಾಬು ಬಂಧನ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಬಿ. ಮುರಾರಿ ಬಾಬುರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪೆರುನ್ನಾದಲ್ಲಿರುವ ಅವರ ಮನೆಯಿಂದ ಇಂದು ಬೆಳಿಗ್ಗೆ ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಸಂಖ್ಯೆ ಈಗ ೨ಕ್ಕೇರಿದೆ. ಮುರಾರಿಯನ್ನು ತನಿಖಾ ತಂಡ ನಿನ್ನೆ ರಾತ್ರಿಯೇ ವಶಕ್ಕೆ ತೆಗೆದುಕೊಂಡಿತ್ತು. ನಂತರ ಗಂಟೆಗಳ ತನಕ ತೀವ್ರ ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಇಂದು ಬೆಳಿಗ್ಗೆ ಅವರ ಬಂಧನ ದಾಖಲಿಸಿಕೊಂಡಿದೆ.

ಈ ಪ್ರಕರಣದ ಒಂದನೇ ಆರೋಪಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತಿಯನ್ನು ತನಿಖಾ ತಂಡ ಈ ಹಿಂದೆಯೇ ಬಂಧಿಸಿತ್ತು. ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳಿದ್ದಾರೆ.

ಮುರಾರಿಬಾಬು 2019ರಲ್ಲಿ ಮುಜ ರಾಯಿ ಮಂಡಳಿಯ ಎಡ್ಮಿನಿಸ್ಟ್ರೇಟಿವ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಶಬರಿಮಲೆ ದೇಗುಲದ ಗರ್ಭಗುಡಿ ದ್ವಾರದ ಚಿನ್ನ ಲೇಪಿತ ಕವಚಗಳು ಕೇವಲ ತಾಮ್ರದ ಕವಚ ಗಳಾಗಿವೆ ಎಂದು ಅವರು 2019 ಜೂನ್ 17ರಂದು ಮಂಡಳಿಯ ದಾಖಲು ಪತ್ರಗಳಲ್ಲಿ ನಮೂದಿಸಿದ್ದರು. ಬಳಿಕ ಆ ಕವಚಗಳನ್ನು ಅವರು ಶಬರಿಮಲೆ ದೇಗುಲದ ಎಕ್ಸಿಕ್ಯೂ ಟಿವ್ ಆಫೀಸರ್‌ರಿಗೆ ಹಸ್ತಾಂತರಿಸಿದ್ದು, ನಂತರ ಆ ಕವಚಗಳನ್ನು ಚಿನ್ನಲೇಪನ ಗೊಳಿಸುವ ಹೆಸರಲ್ಲಿ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತಿ ಅದನ್ನು ಅಲ್ಲಿಂದ ಸಾಗಿಸಿದ್ದನ. ಇದಕ್ಕೆ ಸಂಬಂಧಿಸಿ ಮುರಾರಿಬಾಬುರ ವಿರುದ್ಧ ತನಿಖಾ ತಂಡ ಒಳಸಂಚು ಹೂಡಿದ ಆರೋಪದಂತೆ ಪ್ರಕರಣ ದಾಖಲಿಸಿಕೊಂಡಿದ್ದು ಅದರಂತೆ ಅವರನ್ನು ಬಂಧಿಸಲಾಗಿದೆ. ಬಂಧಿತ ಮುರಾರಿಯನ್ನು ಇಂದು ಸಂಜೆ ರಾನ್ನಿ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾ ಗುವುದೆಂದು ತನಿಖಾ ತಂಡ ತಿಳಿಸಿದೆ. ಮಾತ್ರವಲ್ಲ ಈ ಪ್ರಕರಣದ ಒಂದನೇ ಆರೋಪಿ  ಉಣ್ಣಿಕೃಷ್ಣನ್ ಮತ್ತು ಮುರಾರಿ ಬಾಬುವನ್ನು ಒಟ್ಟಿಗೆ ಕುಳ್ಳಿರಿಸಿ ಮತ್ತೆ ಅವರನ್ನು ವಿಚಾರಣೆ ಗೊಳಪಡಿಸುವ ತೀರ್ಮಾನವನ್ನೂ ತನಿಖಾ ತಂಡ ಕೈಗೊಂಡಿದೆ.

RELATED NEWS

You cannot copy contents of this page