ಕಲ್ಲಿಕೋಟೆ: ವಡಗರ ಒಂಜೀಯಂ ಕಣ್ಣೂರಕ್ಕರ ಮಾಡಕ್ಕರ ಪಾಂಡಿಗದಲ್ಲಿ ಅಸ್ಮಿನಾ (38)ಳನ್ನು ವಸತಿ ಗೃಹದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಲ್ಲಿ ವಸತಿ ಗೃಹದ ರಿಸಪ್ಶನಿಸ್ಟ್ ಹಾಗೂ ಕಾಯಂಕುಳಂ ನಿವಾಸಿಯಾದ ಜೋಬಿ ಜೋರ್ಜ್ ಯಾನೇ ರೋಯ್‌ಯನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ಆಟಿಂಗಲ್‌ನ ಲಾಡ್ಜ್‌ನಲ್ಲಿ ರಿಸಪ್ಶನಿಸ್ಟ್‌ಯಾಗಿರುವ ಜೋಬಿ ಜೋರ್ಜ್ ಪತ್ನಿಯೆಂದು ತಿಳಿಸಿ ಅಸ್ಮಿನಾಳ ಸಹಿತ ಮಂಗಳವಾರ ಸಂಜೆ ವಸತಿ ಗೃಹಕ್ಕೆ ತಲುಪಿದ್ದನು. ಅಸ್ಮಿನಾಳನ್ನು ಕೊಠಡಿಯಲ್ಲಿ ಕುಳ್ಳಿರಿಸಿದ ಬಳಿಕ ರಾತ್ರಿ ಒಂದೂವರೆ ಗಂಟೆ ವರೆಗೆ ಕೆಲಸದಲ್ಲಿ ನಿರತನಾಗಿದ್ದ ಈತ ಆ ಬಳಿಕ ಕೊಠಡಿಗೆ ತೆರಳಿದ್ದನು. ಬುಧವಾರ ಬೆಳಿಗ್ಗೆ ಇವರಿಬ್ಬರು ನಾಪತ್ತೆಯಾದ ಹಿನ್ನೆಲೆಯಲ್ಲಿ ವಸತಿ ಗೃಹದ ನೌಕರರು ತಪಾಸಣೆ ನಡೆಸಿದಾಗ ಕೊಠಡಿ ಒಳಗಿನಿಂದ ಮುಚ್ಚಿದ ಸ್ಥಿತಿಯಲ್ಲಿತ್ತು. ಪೊಲೀಸರು ತಲುಪಿ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಅಸ್ಮಿನಾಳ ಮೃತದೇಹ ರಕ್ತದಲ್ಲಿ ಮಿಂದ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ಕಂಡುಬಂದಿದೆ. ಕೊಠಡಿಯಲ್ಲಿ ಬಲಪ್ರಯೋಗ ನಡೆಸಿದ ಸೂಚನೆಗಳು ಲಭಿಸಿದೆ. ತುಂಡಾದ ಬಿಯರ್ ಬಾಟ್ಲಿಯ ಚೂರುಗಳು ಕೊಠಡಿಯಲ್ಲಿ ಇತ್ತೆಂದು ನೌಕರರು ತಿಳಿಸಿದ್ದಾರೆ. ಬುಧವಾರ ಮಂಜಾನೆ ಜೋಬಿ ವಸತಿಗೃಹದಿಂದ ಹೊರಗೆ ತೆರಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಈತನನ್ನು ಕಲ್ಲಿಕೋಟೆಯಿಂದ ಸೆರೆ ಹಿಡಿದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.

 
								 
															




