ಕಾಸರಗೋಡು: ಮಾದಕದ್ರವ್ಯ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಾನು ಎಸ್ ಪಣಿಕ್ಕರ್ ೭ ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಕಠಿಣ ಸಜೆ ಅನುಭವಿಸ ಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಹೊಸದುರ್ಗ ಆರಂಗಾಡಿ ಅರಾಯಿಕಡವು ನಿವಾಸಿ ಅಬ್ದುಲ್ ಶೆಫೀಕ್ (39) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2019 ಫೆಬ್ರವರಿ 13ರಂದು ಮುಳ್ಳೇರಿಯ-ಕುಂಟಾರಿನಲ್ಲಿ ಆದೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮೆಥಾಪಿಟಾಮಿನ್ ಮಾದಕದ್ರವ್ಯವನ್ನು ವಶಪಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು. ಆ ಪ್ರಕರಣದ ಆರೋಪಿ ಶಿಕ್ಷೆ ವಿಧಿಸಲಾಗಿದೆ. ಅಂದು ಆದೂರು ಠಾಣೆಯ ಎಸ್‌ಐ ಆಗಿದ್ದ ನಿಬಿನ್ ಜೋಯ್ ಈ ಪ್ರಕರಣದ ಬಗ್ಗೆ ಮೊದಲು ತನಿಖೆ ನಡೆಸಿದ್ದರು. ನಂತರ ಇನ್‌ಸ್ಪೆಕ್ಟರ್‌ಗಳಾದ ಎಂ.ಎ. ಮ್ಯಾಥ್ಯು ಮತ್ತು ಎ.ವಿ. ಜೋನ್ ಈ ಪ್ರಕರಣದ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು. ಪ್ರೋಸಿಕ್ಯೂಶನ್ ಪರ ಪಿ. ವೇಣುಗೋಪಾಲನ್ ನ್ಯಾಯಾಲ ಯದಲ್ಲಿ ವಾದಿಸಿದ್ದರು.





