ಮಂಗಳೂರು: ಸುರತ್ಕಲ್‌ನಲ್ಲಿ ಬೈಕ್ ತಡೆದು ನಿಲ್ಲಿಸಿ ಯುವಕರನ್ನು ಆಕ್ರಮಿಸಿದ ಘಟನೆ ನಡೆದಿದೆ. ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ನಿಜಾಮ್ (23),ಕೃಷ್ಣಾಪುರ ಹಿಲ್‌ಸೈಡ್ ನಿವಾಸಿ ಹಸನ್ ಮುರ್ಶಿದ್ (18) ಎಂಬಿವರಿಗೆ ಇರಿಯಲಾಗಿದೆ. ಇವರಲ್ಲಿ ನಿಜಾಮ್‌ನ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ಚೊಕ್ಕಬೆಟ್ಟು ಕಾನದಲ್ಲಿ ಪೆಟ್ರೋಲ್ ಬಂಕ್ ಸಮೀಪ ಘಟನೆ ನಡೆದಿದೆ. ಗಾಯಗೊಂಡು ಆಸ್ಪತ್ರೆಯಲ್ಲಿ ಇರುವವರು ಹಾಗೂ 3 ಮಂದಿ ಗೆಳೆಯರು ಎರಡು ಬೈಕ್‌ಗಳಲ್ಲಾಗಿ ತೆರಳುತ್ತಿದ್ದರು. ಈ ಮಧ್ಯೆ ಪೆಟ್ರೋಲ್ ತುಂಬಿಸಲೆಂದು ಒಂದು ಬೈಕ್ ಪೆಟ್ರೋಲ್ ಬಂಕ್‌ಗೆ ತೆರಳಿದ್ದು ಎರಡನೇ ಬೈಕ್ ರಸ್ತೆ ಬದಿ ನಿಲ್ಲಿಸಿದ್ದರು. ಈ ಸಮಯದಲ್ಲಿ ರಸ್ತೆ ಬದಿಯ ಬಾರ್‌ನಿಂದ ತಲುಪಿದ 4 ಮಂದಿಯ ತಂಡವೊಂದು ವಾಗ್ವಾದ ನಡೆಸಿ ಇರಿದಿದೆಯೆನ್ನಲಾಗಿದೆ. ಅಕ್ರಮಿಗಳು ಭಜರಂಗದಳ ಕಾರ್ಯಕರ್ತರೆನ್ನಲಾಗಿದ್ದು ಪೊಲೀಸರಿಗೆ ಈ ಬಗ್ಗೆ ಸೂಚನೆ ಲಭಿಸಿದೆ.

 
								 
															





