ಶಬರಿಮಲೆ ಚಿನ್ನ ಕೊಳ್ಳೆ : ಮಾಹಿತಿ ಸಂಗ್ರಹಕ್ಕಾಗಿ ಉಣ್ಣಿಕೃಷ್ಣನ್ ಪೋತ್ತಿಯನ್ನು ಬೆಂಗಳೂರಿಗೆ ಕೊಂಡೊಯ್ದ ತನಿಖಾ ತಂಡ; ಇನ್ನಷ್ಟು  ಮಂದಿಯ ಬಂಧನ ಸಾಧ್ಯತೆ

ತಿರುವನಂತಪುರ: ಶಬರಿಮಲೆ ಕ್ಷೇತ್ರದಿಂದ ಚಿನ್ನ ಸಾಗಿಸಿದ ಪ್ರಕರಣದಲ್ಲಿ ಸೆರೆಗೀಡಾದ ಉಣ್ಣಿಕೃಷ್ಣನ್ ಪೋತ್ತಿಯನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ಬೆಂಗಳೂರಿಗೆ ಕರೆದೊಯ್ದಿದೆ. ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್‌ಗೂ ತಲುಪಿಸಿ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ತೀರ್ಮಾನಿಸಿದೆ. ಇದೇ ವೇಳೆ ಪ್ರಕರಣದಲ್ಲಿ ಆರೋಪಿ ಪಟ್ಟಿಯಲ್ಲಿರುವ ಇನ್ನಷ್ಟು ಮಂದ ದೇವಸ್ವಂ ಅಧಿಕಾರಿಗಳ ಬಂಧನ ಶೀಘ್ರ ನಡೆಯಲಿದೆಯೆಂಬ ಸೂಚನೆಯಿದೆ. ಕ್ಷೇತ್ರದ ದ್ವಾರಪಾಲಕ ಶಿಲ್ಪದ ಚಿನ್ನವನ್ನು ಸಾಗಿಸಿದ ಸಂಬಂಧ ಹತ್ತು ಮಂದಿ ಆರೋಪಿಗಳಿದ್ದಾರೆ. ಇದರಲ್ಲಿ ಉಣ್ಣಿಕೃಷ್ಣನ್ ಪೋತ್ತಿ ಹಾಗೂ ಮುರಾರಿಬಾಬುವನ್ನು ಮಾತ್ರವೇ ಇದುವರೆ ಬಂಧಿಸಲಾಗಿದೆ.  ಇದೇ ವೇಳೆ ತನಿಖೆಯನ್ನು ಮಧ್ಯವರ್ತಿಗಳತ್ತ ಸಾಗಿಸುವುದರ ಮುಂಚೆ ಕೆಲವು ನೌಕರರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸಲು ತನಿಖಾ ತಂಡ ನಿರ್ಧರಿಸಿದೆ. ನಿನ್ನೆ ಮುರಾರಿಬಾಬು ಹಾಗೂ ಆರೋಪಿ ಪಟ್ಟಿಯಲ್ಲಿರುವ ಕೆಲವರ ಮನೆಗಳಲ್ಲಿ ತನಿಖಾ ತಂಡ   ಪರಿಶೀಲನೆ ನಡೆಸಿದೆ. ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಮುರಾರಿಬಾಬುವನ್ನು ಕಸ್ಟಡಿಗೆ ತೆಗೆಯಲು ಅರ್ಜಿ ಸಲ್ಲಿಸಲು ತನಿಖಾ ತಂಡ ನಿರ್ಧರಿಸಿದೆ.                

You cannot copy contents of this page