ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ತೃಶೂರು: ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ತೃಶೂರು ಎರುಮಪೆಟ್ಟಿ ಎಂಬಲ್ಲಿ ಸಂಭವಿಸಿದೆ. ಆದೂರ್ ಕಂಡೇರಿವಳಪ್ಪಿಲ್ ಉಮ್ಮರ್ -ಮುಫೀದ ದಂಪತಿಯ ಪುತ್ರ ಮಹಮ್ಮದ್ ಶಹಲ್ ಮೃತಪಟ್ಟ ಮಗು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಮಧ್ಯೆ ಬಾಟ್ಲಿಯ ಮುಚ್ಚಳವನ್ನು ಮಗು ನುಂಗಿರುವುದಾಗಿ ತಿಳಿದುಬಂದಿದೆ. ಉಸಿರಾಟ ಸಾಧ್ಯವಾಗದೆ ಚಡಪಡಿಸುತ್ತಿದ್ದ ಮಗುವಿನ ಬಾಯಿ ತೆರೆದು  ಮನೆಯವರು ನೋಡಿದಾಗ ಮುಚ್ಚಳ ಗಂಟಲಲ್ಲಿ ಸಿಲುಕಿರುವುದು ಕಂಡುಬಂದಿದೆ.   ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಮಗುವಿನ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page