ತಾತ್ಕಾಲಿಕ ಪ್ರಾಧ್ಯಾಪಕರ ನೇಮಕ ಹೆಸರಲ್ಲಿ ಲಂಚ ಸ್ವೀಕಾರ ಆರೋಪ: ಕೇಂದ್ರೀಯ ವಿ.ವಿ ಪ್ರೊಫೆಸರ್ ಬಂಧನ
ಕಾಸರಗೋಡು: ಕಾಸರಗೋಡು ಪೆರಿಯಾದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೆರವಿರುವ ತಾತ್ಕಾಲಿಕ ಪ್ರಾಧ್ಯಾಪಕರ ಒಪ್ಪಂದದ ನವೀಕರಣೆ ಮತ್ತು ಪಿಎಚ್‌ಡಿಗೆ ಪ್ರವೇಶ ಕೊಡಿಸುವ ಹೆಸರಲ್ಲಿ ಲಂಚ ಸ್ವೀಕರಿಸಿದ ಆರೋಪ ದಂತೆ ಪ್ರಸ್ತುತ ವಿ.ವಿಯ ಸೋಶ್ಯಲ್ ವರ್ಕ್ ವಿಭಾ ಗದ ಪ್ರೊಫೆಸರ್ ಎ.ಕೆ. ಮೋಹನ ನ್‌ರನ್ನು ವಿಜಿಲೆನ್ಸ್ ತಂಡ ಬಂಧಿಸಿದೆ.
ಪ್ರಸ್ತುತ ವಿ.ವಿಯ ಸೋಶ್ಯಲ್ ವರ್ಕ್ ವಿಭಾಗದಲ್ಲಿ ಒಪ್ಪಂದದ ಆಧಾರದಲ್ಲಿ ನಡೆಸಲಾದ ಅಧ್ಯಾಪಕ ನೇಮಕಾತಿಯ ಅವಧಿ ಡಿಸೆಂಬರ್ ನಲ್ಲಿ ಕೊನೆಗೊಂಡಿತ್ತು. ಅದನ್ನು ನವೀಕರಿಸುವ ಪ್ರಕ್ರಿಯೆ ಈಗ ನಡೆ ಯುತ್ತಿದೆ. ಅದರಲ್ಲಿ ಮತ್ತೆ ನೇಮಕಾತಿ ಲಭಿಸಲು ಹಾಗೂ ಮುಂದೆ ಪಿಎಚ್‌ಡಿ ಪ್ರವೇಶಕ್ಕಾಗಿರುವ ಅರ್ಜಿ ಸಲ್ಲಿಸಲು ಹಾಗೂ ಹೀಗೆ ಸಲ್ಲಿಸಲಾಗುವ ಅರ್ಜಿಗಳನ್ನು ಡಿಪಾರ್ಟ್‌ಮೆಂಟ್ ರಿಸರ್ಟ್ ಸಮಿತಿ ಅಂಗೀಕರಿಸಬೇಕಾ ದಲ್ಲಿ ಎರಡು ಲಕ್ಷ ರೂ. ಲಂಚ ಕೇಳಲಾಗಿದೆ ಎಂದೂ ಅದರ ಮೊದಲ ಕಂತನ್ನು ನಾಳೆಯೊಳಗಾಗಿ ನೀಡಬೇಕೆಂದು ಮೋಹನನ್ ಆಗ್ರಹಪಟ್ಟಿದಾರೆಂದು ರಾಜ್ಯ ವಿಜಿಲೆನ್ಸ್ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿತ್ತು. ಅದರಂತೆ ವಿಜಿಲೆನ್ಸ್ ವಿಭಾಗದ ಉತ್ತರ ವಲಯದ ಸುಪರಿ ನ್‌ಟೆಂಡೆಂಟ್ ಪ್ರಜೀಶ್ ತೋಟತ್ತಿಲ್‌ರ ನೇತೃತ್ವದ ವಿಜಿಲೆನ್ಸ್ ತಂಡ ಕಾಸರಗೋಡು ವಿಜಿಲೆನ್ಸ್ ವಿಭಾಗದ ಕಾಸರಗೋಡು ಡಿವೈಎಸ್ಪಿ ವಿ.ಕೆ. ವಿಶ್ವಂಭರನ್ ನೇತೃತ್ವದಲ್ಲಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಎ.ಕೆ. ಮೋಹನನ್‌ರನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ.