ಕುಂಬಳೆ: ಇಲ್ಲಿನ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಶಿಕ್ಷಕಿ ಶಶಿಕಲಾ ಕುಂಬಳೆ ಇವರಿಗೆ ಮಂಗಳೂರು ಕಥಾಬಿಂದು ಪ್ರಕಾಶನ ಸಂಸ್ಥೆ ವತಿಯಿಂದ ಶಿಕ್ಷಕರತ್ನ ಪ್ರಶಸ್ತಿ ನಾಳೆ ಪ್ರದಾನ ಮಾಡಲಾಗುವುದು. ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಥೆ, ಕವನ ರಚನೆ, ಭಾಷಣ ಮೊದಲಾದವುಗಳಲ್ಲಿ ಮಾರ್ಗದರ್ಶನ ನೀಡಿ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಬಹಮಾನ ಗಳಿಸುವಂತೆ ಇವರು ಮಾಡಿದ್ದಾರೆ. ಗಣಿತ ಮೇಳದಲ್ಲಿ ತೀರ್ಪುಗಾರರಾಗಿ ಪತ್ರಿಕೆಗಳಲ್ಲಿ ಲೇಖನವನ್ನು ಬರೆಯುವ ಹವ್ಯಾಸವಿಟ್ಟುಕೊಂಡಿದ್ದಾರೆ. ಈಗಾಗಲೇ ಇವರಿಗೆ ಚುಟುಕು, ಯುಗ ಆಚಾರ್ಯ ಜಿ.ವಿ. ಅರಸ್ ಪ್ರಶಸ್ತಿ, ಕಾಸರಗೋಡು ಕವಿ ಸಾಧಕ ಪ್ರಶಸ್ತಿ ಲಭಿಸಿದೆ.







