ಪೈವಳಿಕೆ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಪೈವಳಿಕೆ ಜಿಎಚ್‌ಎಸ್‌ಎಸ್ ನಗರದಲ್ಲಿ ಆರಂಭ ಗೊಂಡಿತು. ಉಪಜಿಲ್ಲಾ ವ್ಯಾಪ್ತಿಯ 113 ಶಾಲೆಗಳಿಂದ 5000ದಷ್ಟು ವಿದ್ಯಾ ರ್ಥಿಗಳು ಭಾಗವಹಿಸುವ ಕಲೋತ್ಸವದ ಮೊದಲ ದಿನ ವೇದಿಕೇತರ ಸ್ಪರ್ಧೆಗಳು ಪೂರ್ತಿಗೊಂಡಿದೆ. ೫೦೦೦ದಷ್ಟು ಮಂ ದಿಗೆ ಮೊದಲ ದಿನ ಆಹಾರ ನೀಡಲಾ ಯಿತು. ನಾಲ್ಕು ದಿನಗಳಲ್ಲಾಗಿ ಕಲೋ ತ್ಸವ 27 ವೇದಿಕೆಗಳಲ್ಲಾಗಿ ನಡೆಯಲಿದೆ. ಶಾಲಾ ಕ್ಯಾಂಪಸ್, ಪಂಚಾಯತ್ ಕಚೇರಿ ಮೈದಾನ, ಪೈಯಕ್ಕಿ ಉಸ್ತಾದ್ ಆವರಣ ಎಂಬೆಡೆಗಳಲ್ಲಿ ಪ್ರಮುಖ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ. ಇಂದು ಬೆಳಿಗ್ಗೆ ಮಂಜೇಶ್ವರ ಎಇಒ ಜೋರ್ಜ್ ಕ್ರಾಸ್ತಾ ಧ್ವಜಾರೋಹಣ ನೆರವೇರಿಸಿದರು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ದರು. ಪಂ. ಅಧ್ಯಕ್ಷೆ ಜಯಂತಿ ಕೆ. ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು.
30ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು, ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸುವರು. ಸ್ಟೇಟ್ ಪ್ರೊಜೆಕ್ಟ್ ಆಫೀಸರ್ ಇಬ್ರಾಹಿಂ ಬಿ. ಮುಖ್ಯ ಅತಿಥಿಯಾಗಿರುವರು. ಪಂ. ಅಧ್ಯಕ್ಷ ರಾದ ಜೀನ್ ಲವೀನಾ ಮೊಂತೇರೊ, ಸುಂದರಿ ಆರ್. ಶೆಟ್ಟಿ, ಭಾರತಿ ಎಸ್, ರುಬೀನಾ ನೌಫಲ್, ಸುಬ್ಬಣ್ಣ ಆಳ್ವ, ಯು.ಪಿ. ತಾಹಿರಾ ಯೂಸಫ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಎಸ್.ಎನ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷ ಪಿ.ಕೆ. ಮೊಹಮ್ಮದ್ ಹನೀಫ ಮಾತನಾಡುವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಜೇಶ್ವರ ಎಇಒ ಜೋರ್ಜ್ ಕ್ರಾಸ್ತಾ, ಸ್ವಾಗತಸಮಿತಿ ಪ್ರಧಾನ ಸಂಚಾಲಕ ವಿಶ್ವನಾಥ, ಎಚ್.ಎಂ. ಫಾರಂ ಉಪಜಿಲ್ಲಾ ಅಧ್ಯಕ್ಷ ಶ್ಯಾಮ್ ಭಟ್, ಎಸ್‌ಎಂಸಿ ಅಧ್ಯಕ್ಷ ಅಸೀಸ್ ಕಳಾಯಿ, ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಭಾಗವಹಿಸಿದರು.







