ಧರ್ಮತ್ತಡ್ಕ: ಇಲ್ಲಿಗೆ ಸಮೀಪದ ಚಳ್ಳಂಗಯ ಅಂಬೇರಿ ನಿವಾಸಿ, ಕೇರಳ ಮುಸ್ಲಿಂ ಜಮಾಯತ್ ಚಳ್ಳಂಗಯ ಘಟಕ ಸದಸ್ಯ, ಕೊಲ್ಲಿ ಉದ್ಯೋಗಿ ಎ.ಎಂ. ಅಬ್ಬಾಸ್ (60), ಸೌದಿ ಅರೇಬಿಯಾದ ದಮಾಮ್‌ನಲ್ಲಿ ಕೆಲಸದ ಸ್ಥಳದಲ್ಲಿ ನಿಧನ ಹೊಂದಿದರು. ಹೃದಯಾಘಾತ ಸಂಭವಿಸಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ಮರಣ ಸಂಭವಿಸಿದೆ. ಒಂದು ವರ್ಷದ ಹಿಂದೆ ಊರಿಗೆ ಬಂದು ಹಿಂತಿರುಗಿ ದ್ದರು. ಮೃತರು ಪತ್ನಿ ಬೀಫಾತಿಮ, ಮಕ್ಕಳಾದ ಮುಹಮ್ಮದ್ ಶಂಸೀರ್, ಅಬ್ದುಲ್ ಖಾದರ್, ಆಯಿಷತ್ ತೌಫೀರ, ಖದೀಜತ್ ತನ್ವೀರ, ಅಳಿಯ ಜಮಾಲ್ ಉರ್ಮಿ, ಸಹೋದರರಾದ ಮುಹಮ್ಮದ್, ಅಬ್ದುಲ್ ಖಾದರ್, ಸಹೋದರಿ ಉಮ್ಮಾಲಿಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







