ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ನಷ್ಟ ವುಂಟುಮಾಡಿದ ದೂರಿನಂತೆ ಕುಂಬಳೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಲಪ್ಪುರಂ ಚೆನ್ನಂಗೋಡ್ ನಿವಾಸಿ ರಾಜೇಶ್ ಕುಮಾರ್ ಕೆ (47) ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾ ಗಿದೆ. ಮಹಿಳೆಯರನ್ನು ಬಸ್ಸಿಗೆ ಹತ್ತಿಸಲಾಗುವುದಿಲ್ಲವೆಂದು ಆರೋಪಿಸಿ ಕುಂಬಳೆ ಪೇಟೆಯಲ್ಲಿ ನಿನ್ನೆ ಅಪರಾಹ್ನ ಇಬ್ಬರು ಬಸ್ಸಿಗೇರಿ ಬೈದು ತನ್ನ ಮೇಲೆ ಹಲ್ಲೆ ನಡೆಸಿದ ರೆಂದು ಆ ಮೂಲಕ ತನ್ನ ಹಾಗೂ ನಿರ್ವಾಹಕನ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಲಾಯಿತು ಮಾತ್ರವಲ್ಲದೆ ಇದರಿಂದ ಸುಮಾರು 20 ಸಾವಿರ ರೂ.ಗಳಿಕೆಗೆ ನಷ್ಟ ಉಂಟಾಗಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲ್ಲಿ ಬಸ್ ಚಾಲಕ ತಿಳಿಸಿದ್ದಾರೆ.







