ಕುಂಬಳೆ: ಮಾರಾಟ ಮಾಡಿಕೊಡುವುದಾಗಿ ಹೇಳಿ ಕಾರು ಪಡೆದ ಬಳಿಕ ವಂಚನೆ ನಡೆಸಿರುವುದಾಗಿ ಆರೋಪಿಸಿ ಯುವತಿ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ನಾಲ್ವರ ವಿರುದ್ದ ಕೇಸು ದಾಖಲಿಸಿಕೊಂಡಿದ್ದಾರೆ. ಪುತ್ತಿಗೆ ಮುಗು ರಸ್ತೆ ಬಳಿಯ ಅಬ್ದುಲ್ ರಶೀದ್, ಸೀತಾಂಗೋಳಿಯ ಮಹಮ್ಮದ್ ರೆಜಾ, ನೀರ್ಚಾಲು ಗೋಳಿಯಡ್ಕದ ಝಿಯಾದ್ ಮತ್ತು ಚೆಟ್ಟುಂಗುಳಿ ಇಸ್ಸತ್ತ್ ನಗರದ ಅಶ್ಫಾಕ್ ಎಂಬವರ ವಿರುದ್ಧ ಈ ಕೇಸು ದಾಖಲಿಸಲಾಗಿದೆ.
ಕುಂಬಳೆಗೆ ಸಮೀಪದ ಪೇರಾಲ್ ಕಣ್ಣೂರು ಹಾಲಿಮತ್ ಸಾಹಿನಾ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪೊಲೀಸರು ಈ ಕೇಸು ದಾಖಲಿಸಿಕೊಂಡಿದ್ದಾರೆ. ತನ್ನ ಕಾರಿನ ಸಾಲವನ್ನು ತೀರಿಸಿ ಅದನ್ನು ಒಳ್ಳೆಯ ಲಾಭ ಲಭಿಸುವ ರೀತಿಯಲ್ಲಿ ಮಾರಾಟ ಮಾಡಿಕೊಡ ಲಾಗುವುದೆಂದು ಈ ಪ್ರಕರಣದ ಒಂದನೇ ಆರೋಪಿ 2024 ಜೂನ್ 10ರಂದು ಆ ಕಾರನ್ನು ತನ್ನಿಂದ ಪಡೆದು ನಂತರ ಆ ಕಾರನ್ನು ಈ ತನಕ ಮಾರಾಟ ಮಾಡಲಾಗಲೀ ಅದರ ಹಣ ನೀಡಲಾಗಲೀ ಮುಂದಾಗದೆ ಇತರ ಆರೋಪಿಗಳು ಆ ಕಾರನ್ನು ಇತರರಿಗೆ ಬಾಡಿಗೆಗೆ ನೀಡಿ ತನ್ನನ್ನು ವಂಚಿಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹಾಲಿಮತ್ ಸಾಹಿನಾ ಆರೋಪಿಸಿದ್ದಾರೆ.






