ಕಾಸರಗೋಡು: ಪಿಟ್ಎನ್ಡಿ ಪಿಎಸ್ ಆಕ್ಟ್ ಪ್ರಕಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚೆರ್ಕಳ ಬಂಬ್ರಾ ಣಿನಗರದ ನಿವಾಸಿ ಹಾಗೂ ಚೆರ್ಕಳ ಎರಿಯಪ್ಪಾಡಿಯಲ್ಲಿ ವಾಸಿಸುತ್ತಿರುವ ಜಾಬೀರ್ ಕೆ.ಎಂ (33) ಎಂಬಾತ ನನ್ನು ಈ ಪ್ರಕಾರ ವಿದ್ಯಾನಗರ ಪೊಲೀಸರು ಹಾಗೂ ಈಗ ನೆಕ್ರಾಜೆ ನೆಲ್ಲಿಕಟ್ಟೆ ನಾರಂಪಾಡಿ ಕೋಟೇಜ್ ನಿವಾಸಿ ಮಹಮ್ಮದ್ ಆಸಿಫ್ ಪಿ.ಎ (31) ಎಂಬಾತನನ್ನು ಈ ಆಕ್ಟ್ ಪ್ರಕಾರ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಗಳಾಗಿ ದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆ ಮೂಲಕ ಪ್ರಸ್ತುತ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಈತನಕ ಬಂಧಿತರಾದವರ ಸಂಖ್ಯೆ ಹನ್ನೊಂದಕ್ಕೇರಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ಎ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಎಎಸ್ಪಿ ಡಾ. ನಂದಗೋಪಾಲ್ರ ಮೇಲ್ನೋಟದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಪಿ.ಶೈನ್ ಮತ್ತು ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಅನಿಲ್ ಕುಮಾರ್ ಮತ್ತು ಎಸ್ಐ ಸವ್ಯಸಾಚಿ ನೇತೃತ್ವದಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ನಂತರ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ.






