ಪೈವಳಿಕೆ: ಕೇಂದ್ರ ಸರಕಾರದ ಜನ ವಿರೋಧಿ ನೀತಿ ಆರೋಪಿಸಿ, ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಎಫ್‌ಎಸ್‌ಇಟಿಒ ಸಂಘಟನೆಯ ನೇತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುವ ಕಾಲ್ನಡೆ ಜಾಥಾದಂತೆ ಇಂದು ಮತ್ತು ನಾಳೆ ಮಂಜೇಶ್ವರದ ವಿವಿಧ ಭಾಗಗಳಲ್ಲಿ ಸಂಚರಿಸುವ ಕಾಲ್ನಡೆ ಜಾಥಾವನ್ನು ನಿನ್ನೆ ಪೈವಳಿಕೆ ನಗರದಲ್ಲಿ ಉದ್ಘಾಟಿಸಲಾ ಯಿತು. ಇಂದು ಮತ್ತು ನಾಳೆ ವಿವಿಧ ಕಡೆಗಳಲ್ಲಿ ಸಂಚರಿಸುವ ಜಾಥಾ ಕುಂಬಳೆಯಲ್ಲಿ ಸಮಾಪ್ತಿಗೊಳ್ಳ ಲಿದೆ. ಪೈವಳಿಕೆ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸಿದರು.
ಮಹಿಳಾ ಅಸೋಸಿ ಯೇಶನ್ ಜಿಲ್ಲಾ ಕಾರ್ಯದರ್ಶಿ, ಸಿಪಿಎಂ ಜಿಲ್ಲಾ ನೇತಾರೆ ಸುಮತಿ ಉದ್ಘಾಟಿಸಿದರು. ಜಾಥಾ ಲೀಡರ್ ಕೆ. ಹರಿದಾಸ್ ಮಾತನಾಡಿದರು. ಪಿ.ಕೆ. ವಿನೋದ್, ಜಯಂತಿ ಕೆ, ಟಿ.ಎನ್.ಮೂಸ ಉಪಸ್ಥಿತರಿದ್ದರು. ಸಿಐಟಿಯು ನೇತಾರ ಚಂದ್ರ ನಾಯ್ಕ್ ಮಾನಿಪ್ಪಾಡಿ, ಅಧ್ಯಾಪಕ ಸಂಘಟನೆಯ, ಉದ್ಯೋಗಸ್ಥರ ಸಂಘಟನೆಯ ವಿವಿಧ ಮುಖಂಡರು ಭಾಗವಹಿಸಿದರು. ಕೆಎಸ್‌ಟಿಯು ಜಿಲ್ಲಾ ಅಧ್ಯಕ್ಷ ಶ್ಯಾಂ ಭಟ್ ಸ್ವಾಗತಿಸಿದರು.







