ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ 5ರಿಂದ

ತಿರುವನಂತಪುರ: ಎಸ್‌ಎಸ್ ಎಲ್‌ಸಿ ಪರೀಕ್ಷೆ ಮುಂದಿನ ವರ್ಷ ಮಾರ್ಚ್ ೫ರಿಂದ ಆರಂಭಗೊಂಡು ೩೦ರಂದು ಕೊನೆಗೊಳ್ಳಲಿದೆ. ಇದೇ ರೀತಿ ಹೈಯರ್ ಸೆಕೆಂಡರಿ ಪ್ರಥಮ ವರ್ಷ ಪರೀಕ್ಷೆ ಮಾರ್ಚ್ 5ರಂದು ಆರಂಭಗೊಂಡು 27ರ ತನಕ ಮುಂದುವರಿಯಲಿದೆ. ಹೈಯರ್ ಸೆಕೆಂಡರಿ ದ್ವಿತೀಯ ವರ್ಷದ ಪರೀಕ್ಷೆ ಮಾರ್ಚ್ ೬ರಂದು ಆರಂಭಗೊಂಡು 28ರ ತನಕ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು ಬೆಳಿಗ್ಗೆ 9.30 (ಶುಕ್ರವಾರದಂದು 9.15) ಆರಂಭಗೊಳ್ಳಲಿದೆ. ಪ್ಲಸ್‌ವನ್ ಪರೀಕ್ಷೆ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ರಾಜ್ಯ ದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈ ಬಾರಿ 9 ಲಕ್ಷದಷ್ಟು ಹಾಗೂ ಹೈಯರ್ ಸೆಕೆಂಡರಿ ಮತ್ತು ವೊಕೇ ಷನಲ್ ಹೈಯರ್ ಸೆಕೆಂಡರಿ ಪರೀಕ್ಷೆ ಯಲ್ಲಿ ಒಟ್ಟು 53000 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ.

RELATED NEWS

You cannot copy contents of this page