ಕಾಸರಗೋಡು: ಚೆರ್ಕಳದಲ್ಲಿ ಬಹು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯ ಕೊಠಡಿಯೊಳಗೆ ಜೂಜಾಟ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ಇವರ ಕೈಯಿಂದ 55,000 ರೂ. ವಶಪಡಿಸಲಾಗಿದೆ. ಜೂಜಾಟ ನಡೆಯುತ್ತಿರುವ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪಿ. ಶೈನ್ರ ನೇತೃತ್ವದಲ್ಲಿ ಮೊನ್ನೆ ರಾತ್ರಿ 10.30ರ ವೇಳೆ ದಾಳಿ ನಡೆಸಲಾಗಿದೆ. ಕುಂಡAಗುಳಿ ಕಾರಕ್ಕಾಡ್ ಹೌಸ್ನ ಮುಹಮ್ಮದ್ ಕುಂuಟಿಜeಜಿiಟಿeಜ (46), ಚೆರ್ಕಳ ಪಾಡಿ ರೋಡ್ ಕುದಿರತ್ ನಗರದ ಅಬ್ದುಲ್ ಹಮೀದ್ (42), ಬೇಡಡ್ಕ ಪಂಚಾಯತ್ ಕಚೇರಿ ಸಮೀಪದ ವರಕ್ಕಾಡ್ ಅಬ್ದುಲ್ ಶುಕೂರ್ (42), ಕುಂಡAಗುಳಿ ಚೆಂಬಕ್ಕಾಡ್ ಪನ್ನಿಯೋಡಿ ಹೌಸ್ನ ಟಿ. ಇಬ್ರಾಹಿಂ, ಕುಂಬಳೆ ಬಂಬ್ರಾಣ ಇಚ್ಲಂಪಾಡಿ ಕಳತ್ತೂರು ನಿವಾಸಿ ಎಚ್. ರುತೀಶ, ಕುಂಬಳೆ ಬದ್ರಿಯ ಹೌಸ್ನ ಅಬ್ದುಲ್ ಸಾದಿಕ್ (31), ಪನಯಾಲ್ ವಿಲ್ಲೇಜ್ನ ಪಳ್ಳಿಕೆರೆ ನಿವಾಸಿ ಪಿ.ಎಸ್. ಇಲ್ಯಾಸ್ (45), ಕುಂಡAಗುಳಿ ಚೇಡಿಕುಂಡ್ ನಿವಾಸಿ ಸಿ.ಕೆ. ಮಜೀದ್ (40), ಬೇಕಲಕೋಟೆ ಕಲ್ಲಿಂಗಾಲ್ ನಿವಾಸಿ ಪಿ. ಫೈಸಲ್ (53), ಮುಳಿಯಾರು ಅಮ್ಮಂಗೋಡ್ ಶಂಸಾದ್ ಮಂಜಿಲ್ನ ಕೆ.ಎಂ. ಪವಾಸ್ (40), ಕರ್ನಾಟಕದ ಬಂಟ್ವಾಳ ಬೀಮುಡ ಶಾಂತಿಯAಗಾಡಿ ನಿವಾಸಿ ಸಮೀರ್ (45), ಬಂಟ್ವಾಳ ಬಿ ಸಿ ರೋಡ್ ಪರ್ಳಿಯ ಹೌಸ್ನ ಎಂ. ರಿಯಾಸ್ (45), ಕಾಸರಗೋಡು ಅಡ್ಕತ್ತಬೈಲ್ನ ಅರ್ಜಾಲ್ ನಿವಾಸಿ ಕೆ. ಅನಿಲ್ ಕುಮಾರ್ (38), ಬಂದ್ಯೋಡು ಇಚ್ಲಂಗೋಡು ನಿವಾಸಿ ಮುಸ್ತಫ ಕೆ.ಪಿ. (42), ಕರ್ನಾಟಕದ ಬಾಗಲಕೋಟೆ ಹಿರೆಮುಚ್ಚಗುಡ್ಡದ ಚಿದಾನಂದ (42), ಚಿತ್ತಾರಿ ರಾವಣೇಶ್ವರ ಕೊಟ್ಟಿಲಂಗಾಡ್ ನಿವಾಸಿ ಶಂಸೀರ್ ಅಬ್ಬಾಸ್ (38), ಮಂಗಳೂರು ಸಜಿಪೆ ಮೂಡದ ಗುಳ್ಳೆ ಹೌಸ್ನ ಅಸೀಸ್ (40), ದೇಲಂಪಾಡಿ ಪರಪ್ಪೆ ಪಚ್ಚೋಡಿಯ ಕೆ.ಕೆ. ಅಶ್ರಫ್ (28), ಮೊಯ್ದು (50), ಉಪ್ಪಳ ಕಂಚಿಕಟ್ಟೆ ಹೌಸ್ನ ಮೊಹಮ್ಮದ್ ಹುಸೈನಾರ್ (58) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






