ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯ : ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ

ಕಾಸರಗೋಡು: ಕಾಸರಗೋ ಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂಬ ಸಹಿತ ವಿವಿಧ ಬೇಡಿಕೆಗಳನ್ನು ಮುಂ ದಿರಿಸಿಕೊಂಡು ಕರ್ನಾಟಕ ಸಮಿತಿ,   ಕನ್ನಡ ಪರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ  ನಾಳೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಧರಣಿ ಸತ್ಯಾಗ್ರಹ ಆರಂಭಗೊಳ್ಳಲಿದೆ.

ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೆ ನೀಡಲಾದ ಸವಲತ್ತುಗಳನ್ನು ಕಡಿಮೆ ಮಾಡಲಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ತಿಳಿಯದ ಅಧ್ಯಾಪಕರನ್ನು, ಕನ್ನಡ ಬಲ್ಲ ಎಲ್‌ಡಿ ಕ್ಲರ್ಕ್ ಹುದ್ದೆಗಳಿಗೆ ಕನ್ನಡ ತಿಳಿಯದ ವರನ್ನು  ನೇಮಕ ಮಾಡಲಾಗುತ್ತದೆ. ಅರ್ಜಿ ಫಾರಂ, ನೋಟೀಸು, ರಶೀದಿ, ದಾಖಲುಪುಸ್ತಕ, ಕೈಪಿಡಿ ಮೊದಲಾದವುಗಳನ್ನು  ಮಲೆಯಾಳದಲ್ಲಿ ಮಾತ್ರ ಒದಗಿಸುತ್ತಿರುವುದರಿಂದ ಕನ್ನಡಿಗರು ಭಾರೀ ಸಮಸ್ಯೆಎದುರಿ ಸಬೇಕಾಗುತ್ತಿದೆ. ಅಲ್ಲದೆ ಇನ್ನೂ ಹಲವು ಸಮಸ್ಯೆಗಳನ್ನು ಕನ್ನಡಿಗರು ಇಲ್ಲಿ ಎದುರಿಸುತ್ತಿದ್ದಾರೆ.  ಇವುಗಳಿಗೆಲ್ಲಾ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಲಿರುವುದು. ಬಳಿಕ ಬೇಡಿಕೆಗಳು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲರಿಗೆ, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು ಮೊದಲಾದವರಿಗೆ ಸಲ್ಲಿಸಲಾಗುವುದು.   ಧರಣಿ  ಸತ್ಯಾಗ್ರಹದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳು ವಿನಂತಿಸಿವೆ.

RELATED NEWS

You cannot copy contents of this page