ಕುಂಬಳೆಯಲ್ಲಿ ಟ್ರಾಫಿಕ್ ಪರಿಷ್ಕಾರ: ಪೇಟೆಯಲ್ಲಿ ತೀವ್ರಗೊಂಡ ಪ್ರತಿಭಟನೆ

ಕುಂಬಳೆ: ವ್ಯಾಪಾರಿ ಪ್ರತಿನಿಧಿಗಳ ಅಂಗೀಕಾರ ದೊಂದಿಗೆ ಕುಂಬಳೆ ಪಂಚಾಯತ್ ಪೇಟೆಯಲ್ಲಿ ಏರ್ಪಡಿಸಿದ ಟ್ರಾಫಿಕ್ ಪರಿಷ್ಕಾರದಿಂದಾಗಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರಿಂದ ಪ್ರತಿಭಟನೆ ತೀವ್ರಗೊಂಡಿದೆ. ಕುಂಬಳೆಯ ವ್ಯಾಪಾರಿ ನೇತಾರರು ವ್ಯಾಪಾರ ವಲಯವನ್ನು  ನಾಶಗೊಳಿಸುತ್ತಿದ್ದಾರೆಂದು ಪೇಟೆಯ ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ. ವ್ಯಾಪಾರಿಗಳು, ಸಂಘಟನಾ ಪದಾಧಿಕಾರಿಗಳ ಒತ್ತಡದಿಂದಾಗಿ ಕುಂಬಳೆ ಪಂಚಾಯತ್ ಪೊಲೀಸರ ಸಹಾಯದೊಂದಿಗೆ ಪೇಟೆಯಲ್ಲಿ ಟ್ರಾಫಿಕ್ ಪರಿಷ್ಕಾರ ಜ್ಯಾರಿಗೆ ತಂದಿರುವುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಾಜಿ ಅಧ್ಯಕ್ಷ ವಿಕ್ರಂ ಪೈ ತಿಳಿಸಿದ್ದಾರೆ. ಪರಿಷ್ಕಾರ ಜ್ಯಾರಿಗೆ ಬಂದಾಗ ಆ ಕುರಿತು ಪಂಚಾಯತ್ ಅಧಿಕಾರಿಗಳು ಕರೆದ  ವ್ಯಾಪಾರಿ ಪ್ರತಿನಿಧಿಗಳ ಹಾಗೂ ಪೊಲೀಸರ ಸಭೆಯಲ್ಲಿ ಭಾಗವಹಿಸಿದವರೇ ಟ್ರಾಫಿಕ್ ಪರಿಷ್ಕಾರದ ವಿರುದ್ಧ ಪ್ರತಿಭಟಿಸಿರು ವುದಾಗಿ ಹೇಳಲಾಗುತ್ತಿದೆ. ಇದು ಯಾರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾಗಿದೆಯೆಂದು ವಿಕ್ರಂ ಪೈ ಪ್ರಶ್ನಿಸುತ್ತಿದ್ದಾರೆ. ಟ್ರಾಫಿಕ್ ಪರಿಷ್ಕಾರ ವ್ಯಾಪಾರ ವಲಯಕ್ಕೆ ಹಾಗೂ ವ್ಯಾಪಾರಿಗಳಿಗೆ ಸಮಸ್ಯೆ ಸೃಷ್ಟಿ ಸುತ್ತಿದೆಯೆಂದು ಅವರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಇದರಿಂದ ಭಾರೀ ಸಮಸ್ಯೆ ಎದುರಾಗಿದೆ. ಪೇಟೆಗೆ ತಲುಪಿ ಪ್ರಯಾಣಿಕರನ್ನು ಇಳಿಸಿ ಹಾಗೂ ಹತ್ತಿಸಿ ಪ್ರಯಾಣ ಮುಂದುವರಿಸುವ ಬಸ್ಸುಗಳನ್ನು  ಅತ್ತ ಇತ್ತ    ಬದಲಿಸಬೇಕಾದ ಯಾವ ಅಗತ್ಯವಿ ದೆಯೆಂದು ಅವರು ಪ್ರಶ್ನಿಸಿದ್ದಾರೆ. ಹಳೆಯ  ಬಸ್ ನಿಲ್ದಾಣದಲ್ಲಿ ಯಾವ ತೊಂದರೆ ಎದುರಾಗಿತ್ತು? ಅಲ್ಲಿಂದ  ಬಸ್  ನಿಲ್ದಾಣವನ್ನು ಸ್ಥಳಾಂತರಿಸಿ ಒಂದು ಬ್ಯಾಂಕ್‌ನ ಮುಂದೆ  ಏರ್ಪಡಿಸಿರುವುದು ಬ್ಯಾಂಕ್ ವ್ಯವಹಾರ ನಡೆಸುವವರಿಗೆ  ಭಾರೀ ಸಮಸ್ಯೆ ಸೃಷ್ಟಿಸುತ್ತಿದೆ.  ಅಲ್ಲಿ ಬಸ್ಸುಗಳನ್ನು ತಿರುಗಿಸಲು ಚಾಲಕರು ತೊಂದರೆ ಎದುರಿಸುತ್ತಿದ್ದಾರೆ.  ನಾಲ್ಕು  ಕಳ್ಳ ವೈಟಿಂಗ್ ಶೆಡ್‌ಗಳನ್ನು ನಿರ್ಮಿಸಿರುವುದನ್ನು ನ್ಯಾಯೀಕರಿಸಲು ಮಾತ್ರವೇ ಕುಂಬಳೆ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿರುವುದಾಗಿ ವಿಕ್ರಂ ಪೈ ಆರೋಪಿಸಿದ್ದಾರೆ. ಮಾತ್ರವಲ್ಲ ಟ್ರಾಫಿಕ್ ಪರಿಷ್ಕಾರದ ಹೆಸರಲ್ಲಿ ನೋ ಎಂಟ್ರಿ, ವನ್‌ವೇ, ನೋ ಪಾರ್ಕಿಂಗ್ ಬೋರ್ಡ್ ಗಳನ್ನಿರಿಸಿ ಸಣ್ಣ ವಾಹನ ಪ್ರಯಾಣಿಕರಿಗೆ, ಆಟೋ ರಿಕ್ಷಾ, ಕಾರು ಪ್ರಯಾಣಿಕರಿಗೆ  ಭಾರೀ ಸಮಸ್ಯೆ ಎದುರಾಗುತ್ತಿದೆ. ವ್ಯಾಪಾರಿಗಳನ್ನು ಸಂಘಟನಾ ನೇತಾರರು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.  ಕುಂಬಳೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ  ಘಟಕಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಸತ್ತಾರ್ ಆರಿಕ್ಕಾಡಿ, ಕೋಶಾಧಿಕಾರಿ ಅನ್ವರ್,ಯೂತ್ ವಿಂಗ್ ನೇತಾರ ಅಶ್ರಫ್ ಎಂಬಿವರು  ವ್ಯಾಪಾರಿಗಳನ್ನು ಪ್ರತಿನಿಧೀಕರಿಸಿ ಟ್ರಾಫಿಕ್ ಪರಿಷ್ಕಾರ ಸಭೆಯಲ್ಲಿ  ಭಾಗವಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ವಿಕ್ರಂ ಪೈ ತಿಳಿಸಿದ್ದಾರೆ. ಟ್ರಾಫಿಕ್ ಪರಿಷ್ಕಾರ ನಿರ್ಧಾರಕ್ಕೆ ಇವರು ಸಹಿ ಹಾಕಿದ್ದಾರೆ. ಅದು ವ್ಯಾಪಾರಿಗಳಿಗೆ , ನಾಗರಿಕರಿಗೆ, ಆಟೋಗಳಿಗೆ,ಕಾರುಗಳಿಗೆ ಸಮಸ್ಯೆಯಾಗಿದೆ. ಸಭೆಯಲ್ಲಿ  ವಿರೋಧ ವ್ಯಕ್ತಪಡಿಸಿರುತ್ತಿದ್ದರೆ ಯಾರಿಗೂ ತೊಂದರೆ ಉಂಟಾಗದ ರೀತಿಯಲ್ಲಿ ಟ್ರಾಫಿಕ್ ಪರಿಷ್ಕಾರ ಏರ್ಪಡಿಸಬಹುದಾಗಿತ್ತು. ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಯಾವ ಸಮಸ್ಯೆ ಕುಂಬಳೆಯಲ್ಲಿ ಉಂಟಾಗಿತ್ತು.  ಬೇಕಾದಲ್ಲಿ ಮಂಗಳೂರಿನಿಂದ ಬರುವ ಬಸ್‌ಗಳನ್ನು ಕಳತ್ತೂರು ಬಸ್‌ಗಳನ್ನು ಈಗ ಬದಲಾಯಿಸಿದ ಸ್ಥಳಕ್ಕೆ ಸ್ಥಳಾಂತರಿಸಬ ಹುದಾಗಿತ್ತು. ಆ ಹಿಂದೆ ಆಟೋ ಹಾಗೂ ಸಣ್ಣ ವಾಹನಗಳನ್ನು ನಿಲ್ಲಿಸಿಸುತ್ತಿದ್ದಲ್ಲಿ ನೋ ಪಾರ್ಕಿಂಗ್ ಬೋರ್ಡ್  ಇರಿಸಲಾಗಿದೆ ಯೆಂದು ಚಾಲಕರು ಹಾಗೂ ವಾಹನ ಮಾಲಕರು ಹೇಳುತ್ತಿದ್ದಾರೆ. ವ್ಯಾಪಾರಿಗಳು ಟ್ರಾಫಿಕ್ ಪರಿಷ್ಕಾರಕ್ಕೆ ನಿರ್ದೇಶಿಸಿರುವುದಾಗಿ ಪಂಚಾಯತ್ ಅಧ್ಯಕ್ಷ ತಿಳಿಸಿರುವುದಾಗಿ ಅವರು ಹೇಳುತ್ತಿದ್ದಾರೆ. ಟ್ರಾಫಿಕ್ ಪರಿಷ್ಕಾರ ವ್ಯಾಪಾರಿಗಳಿಗೆ ಭಾರೀ ಸಮಸ್ಯೆಯಾಗಿರುವುದು  ಆ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಸಂಘಟನೆ ನೇತಾರರಲ್ಲಿ  ವ್ಯಾಪಾರಿ ಪ್ರತಿನಿಧಿ ಇಲ್ಲದಿರುವುದರಿಂದಾಗಿದೆಯೆಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಸಂಘಟನೆಯ ಅಧ್ಯಕ್ಷ ಚಿನ್ನ ವ್ಯಾಪಾರಿಯಾಗಿದ್ದಾರೆ. ಚಿನ್ನ ವ್ಯಾಪಾರಿಗಳ ಹಿತಾಸಕ್ತಿಯನ್ನು ಅವರು ಪರಿಗಣಿಸುತ್ತಾರೆ.  ಕೋಶಾಧಿಕಾರಿ ಔಷಧಿ ಅಂಗಡಿ ಮಾಲಕನಾಗಿದ್ದಾರೆ.

ಅವರ ಗ್ರಾಹಕರ ಹಿತಾಸಕ್ತಿಯನ್ನು ಅವರು ಸಂರಕ್ಷಿಸುತ್ತಾರೆ. ಇದೇ ವೇಳೆ ವ್ಯಾಪಾರಿ ಯೂನಿಟ್ ಸೆಕ್ರೆಟರಿ ವ್ಯಾಪಾರಿಯಲ್ಲವೆಂದೂ ಅವರಿಗೆ  ಅಂಗಡಿ ಕೂಡ ಇಲ್ಲವೆಂದೂ ಆದ್ದರಿಂದ ವ್ಯಾಪಾರಿಗಳಿಗೆ ಈ ಗತಿ  ಉಂಟಾಗಿದೆಯೆಂದು ಅವರು ತಿಳಿಸಿದ್ದಾರೆ.ಇನ್ನು ಅದನ್ನು ಅನುಭವಿಸುವುದಲ್ಲದೆ  ಬೇರೇನು ಪರಿಹಾರವಿದೆಯೆಂದು ಅವರು ಅಭಿಪ್ರಾಯಪಡುತ್ತಿದ್ದಾರೆ.

RELATED NEWS

You cannot copy contents of this page