ಕಾಸರಗೋಡು: ಪ್ರತ್ಯೇಕವಾಗಿ ವಾಸಿಸುವ ಪತ್ನಿ ಹಾಗೂ ಮೊಮ್ಮಗಳು ನಿದ್ರಿಸುತ್ತಿದ್ದ ಕೊಠಡಿಗೆ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಅವರನ್ನು ಕೊಲೆಗೈಯ್ಯಲು ವ್ಯಕ್ತಿಯೋರ್ವ ಯತ್ನಿಸಿದ ಘಟನೆ ನಡೆದಿದೆ. ಆದರೆ ನಿದ್ರಿಸುತ್ತಿದ್ದ ಅವರಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಕೃತ್ಯವೆಸಗಿದ ವ್ಯಕ್ತಿ ಸುಟ್ಟು ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಪಾಣತ್ತೂರು ನೆಲ್ಲಿಕುನ್ನುವಿನ ಜೋಸೆಫ್ (65) ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತಿಳಿದುಬಂದಿದೆ. ನಿನ್ನೆ ರಾತ್ರಿ 10.30 ರ ವೇಳೆ ಘಟನೆ ನಡೆದಿದೆ. ಈ ಘಟನೆ ಕುರಿತು ಪೊಲೀಸರು ಈರೀತಿ ತಿಳಿಸುತ್ತಿದ್ದಾರೆ.-“ಜೋಸೆಫ್ ಹಾಗೂ ಪತ್ನಿ ಸಿಸಿಲಿ ಹಲವು ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದಾರೆ. ಸಿಸಿಲಿ ಹಾಗೂ ಮಗ ಶಾಜಿ, ಆತನ ಪತ್ನಿ, ಮಗಳಾದ ಆರರ ಹರೆಯದ ಬಾಲಕಿ ಒಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ರಾತ್ರಿ ಸಿಸಿಲಿ ಹಾಗೂ ಮೊಮ್ಮಗಳು ನಿದ್ರಿಸುತ್ತಿದ್ದ ಕೊಠಡಿಯ ಕಿಟಿಕಿ ಮೂಲಕ ಒಳಗೆ ಪೆಟ್ರೋಲ್ ಸುರಿದು ಕಿಚ್ಚಿಡಲಾಗಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಅಲ್ಲಿ ನಿದ್ರಿಸಿದ್ದವರು ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಈ ಮಧ್ಯೆ ಕೃತ್ಯವೆಸಗಿದ ಜೋಸೆಫ್ ಬೆಂಕಿ ಸುಟ್ಟು ಗಾಯಗೊಂಡಿದ್ದಾನೆ. ಇದೇ ವೇಳೆ ಮನೆಯವರ ಬೊಬ್ಬೆ ಕೇಳಿ ತಲುಪಿದ ನಾಗರಿಕರು ಹಾಗೂ ಪಾಣತ್ತೂರು ಸಹಾಯ ಕೇಂದ್ರದಲ್ಲಿದ್ದ ಪೊಲೀಸರು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದ್ದಾರೆ. ಮಂಚ ಹಾಗೂ ಕಿಟಿಕಿ ಉರಿದು ನಾಶಗೊಂಡಿದೆ. ಬಳಿಕ ಸುಟ್ಟು ಗಾಯ ಗೊಂಡ ಜೋಸೆಫ್‌ನನ್ನು ಪೊಲೀಸರು ಆಸ್ಪತ್ರೆಗೆ ತಲು ಪಿಸಿದ್ದಾರೆ” ಎಂದು ತಿಳಿಸಲಾಗಿದೆ. ಘಟನೆ ಕುರಿತು ರಾಜ ಪುರಂ ಪೊಲೀಸರು ತನಿಖೆ ಆರಂಭಿ ಸಿದ್ದಾರೆ. ತೊಡುಪುಳ ಚೀನಕುಳಿ ಎಂಬಲ್ಲಿ ಮಗನ ಸಹಿತ ನಾಲ್ಕು ಮಂದಿಯನ್ನು ಪೆಟ್ರೋಲ್ ಸುರಿದು ಕೊಲೆಗೈದ ಪ್ರಕರಣದ ಆರೋ ಪಿಯಾದ ಆಲಿಯಕುನ್ನೇಲ್ ಹಮೀದ್ (82)ಗೆ ಇಡುಕ್ಕಿ ಅಡಿಶನಲ್ ಸೆಶನ್ಸ್ ನ್ಯಾಯಾಲಯ (1) ನಿನ್ನೆ ಗಲ್ಲುಶಿಕ್ಷೆ ವಿಧಿಸುವಂತೆ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಪಾಣತ್ತೂರಿನಲ್ಲಿ ಇದೇ ರೀತಿಯ ಕೃತ್ಯವೆಸಗಲು ಪ್ರಯತ್ನ ನಡೆದಿದೆ.







