ಕುಂಬಳೆ: ನ್ಯಾಯಾಲಯದ ನಿರೀಕ್ಷಣೆ, ಕೇಸು ಜ್ಯಾರಿಯಲ್ಲಿರುವಾಗಲೇ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುವ ಟೋಲ್‌ಗೇಟ್ ಕಾಮಗಾರಿ ಪೂರ್ತಿ ಗೊಳ್ಳುತ್ತಿದೆ. ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿದರೆ ಟೋಲ್‌ಗೇಟ್‌ನ 95 ಶೇಕಡಾ ಕೆಲಸವು ಪೂರ್ತಿಗೊಂಡಿದೆ. ಗೇಟ್‌ನ ಷರತ್ತುಗಳು ಅಡಕವಾದ ಬೋರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಟೋಲ್ ಸಂಗ್ರಹಿಸುವುದಕ್ಕಿರುವ ಕೇಂದ್ರ ಸರಕಾರದ ಅನುಮತಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯುತ್ತಿದೆ. ಅದು ಲಭಿಸಿದ ಕೂಡಲೇ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ. ಹೆದ್ದಾರಿ 66 ಆರಿಕ್ಕಾಡಿಯಲ್ಲಿ ನಿರ್ಮಿಸುವ ಟೋಲ್ ಪ್ಲಾಝಾ ವಿರುದ್ಧ ನ್ಯಾಯಾಲಯ ವಿಚಾರಣೆ ಅಕ್ಟೋಬರ್ ೨೮ರಂದು ನಡೆಸಬೇಕಾಗಿ ದ್ದರೂ ಅದನ್ನು ಮೂರು ವಾರಕ್ಕೆ ಮುಂದೂಡಲಾಗಿದೆ. ಅದರ ಮುಂಚಿತ ಕೆಲಸಗಳನ್ನು ಪೂರ್ತಿಗೊಳಿಸಿ ಟೋಲ್ ಸಂಗ್ರಹ ಆರಂಭಗೊಳ್ಳಬಹುದೆಂಬ ಆತಂಕ ಸ್ಥಳೀಯರು ಹಾಗೂ ಕ್ರಿಯಾ ಸಮಿತಿ ಪದಾಧಿಕಾರಿಗಳಲ್ಲಿದೆ. ಹಾಗಾದರೆ ಆರಿಕ್ಕಾಡಿ ಹಾಗೂ ತಲಪ್ಪಾಡಿಯಲ್ಲಿ ಟೋಲ್ ನೀಡಬೇಕಾಗಿ ಬರಲಿದ್ದು, ಪ್ರಯಾಣಿಕರಿಗೆ ಇದೊಂದು ದೊಡ್ಡ ಹೊಡೆತವಾಗಿ ಮೂಡಿಬರಲಿದೆ.
ನ್ಯಾಯಾಲಯದಲ್ಲಿ ತಮಗೆ ಅನುಕೂಲಕರವಾದ ತೀರ್ಪು ಉಂಟಾಗಬ ಹುದೆಂದು ಕ್ರಿಯಾ ಸಮಿತಿ ನಿರೀಕ್ಷಿಸುತ್ತಿದೆ ಎಂದು ಪದಾಧಿಕಾರಿಗಳು ನುಡಿಯುತ್ತಾರೆ. ಈ ಮಧ್ಯೆ ಆರಿಕ್ಕಾಡಿಯಲ್ಲಿ ಟೋಲ್ ಗೇಟ್ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಹೆದ್ದಾರಿಯ ಎರಡನೇ ರೀಚ್‌ನ ಟೋಲ್‌ಗೇಟ್ ನಿರ್ಮಾಣ ಪೂರ್ತಿಯಾಗುವವರೆಗೆ ಆರಿಕ್ಕಾಡಿಯಲ್ಲಿ ಟೋಲ್ ಪ್ಲಾಝಾ ಮೂಲಕ ಟೋಲ್ ಸಂಗ್ರಹ ನಡೆಸಲು ಪ್ರಾಧಿಕಾರ ಯತ್ನಿಸುತ್ತಿದೆ. ಎರಡನೇ ರೀಚ್‌ನ ಕಾಮಗಾರಿ ಪೂರ್ತಿಯಾಗಲು ಇನ್ನೂ ಹಲವು ತಿಂಗಳುಗಳು ಬೇಕಾಗಿ ಬರಲಿದೆ. ಅದುವರೆಗೆ ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೊಗ್ರಾಲ್ ಪುತ್ತೂರು ಮೊದಲಾದ ಪಂ.ಗಳ ಹಲವಾರು ವ್ಯಾಪಾರಿಗಳು ಸಹಿತದ ಜನರಿಗೆ ಭಾರೀ ಮೊತ್ತ ವೆಚ್ಚವಾಗಲಿದೆ.







