ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆ: ಓರ್ವ ಆರೋಪಿ ಬಂಧನ: ಇನ್ನೋರ್ವನಿಗಾಗಿ ಶೋಧ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆಗೈದು ಅವಾಚ್ಯವಾಗಿ ನಿಂದಿಸಿದ ಪ್ರಕರಣ ದಲ್ಲಿ ಆರೋಪಿಯಾದ ಓರ್ವನನ್ನು ಬಂಧಿಸಲಾಗಿದೆ.   ಉಪ್ಪಳ ಹಿದಾಯತ್ ಬಜಾರ್‌ನ ಮೊಹಮ್ಮದ್ ಸಿರಾಜುದ್ದೀನ್ (26) ಎಂಬಾತ ಬಂಧಿತ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಅಕ್ಟೋಬರ್ 27ರಂದು ಅಪರಾಹ್ನ ೩.೩೦ಕ್ಕೆ  ಮಂಗಳೂರಿನಿಂದ ಕಾಸರ ಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ಕುಂಬಳೆಯಿಂದ ಹತ್ತಿದ ಮೊಹಮ್ಮದ್ ಸಿರಾಜುದ್ದೀನ್ ಹಾಗೂ ಇನ್ನೋರ್ವ ಮಹಿಳೆ ಯರಿಗೆ ಬಸ್ ನಿಲ್ಲಿಸುತ್ತಿಲ್ಲವೆಂದು  ಆರೋಪಿಸಿ ಚಾಲಕ ಮಲಪ್ಪುರಂ ನಿವಾಸಿ ರಾಜೇಶ್ ಕುಮಾರ್ (47) ಎಂಬವರ ಶರ್ಟ್‌ನ ಕಾಲರ್ ಹಿಡಿದು ಎಳೆದು ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ಚಾಲಕ ರಾಜೇಶ್ ಕುಮಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇವರ ದೂರಿನಂತೆ ಮೊಹಮ್ಮದ್ ಸಿರಾಜುದ್ದೀನ್ ಸಹಿತ ಇಬ್ಬರ ವಿರುದ್ಧ ಪೊಲೀಸರುಕೇಸು ದಾಖಲಿಸಿಕೊಂ ಡಿದ್ದಾರೆ. ಈ ಪೈಕಿ ಮೊಹಮ್ಮದ್ ಸಿರಾಜುದ್ದೀನ್‌ನನ್ನು ಕುಂಬಳೆ ಇನ್‌ಸ್ಪೆಕ್ಟರ್ ಟಿ.ಕೆ.ಮುಕುಂದನ್, ಪ್ರೊಬೆಶನರಿ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿದ್ದಾರೆ.

RELATED NEWS

You cannot copy contents of this page