ಉಪ್ಪಳ ಗೇಟ್ ಸಮೀಪ ಮಂಗಳೂರು ನಿವಾಸಿಯ ಮೃತದೇಹ ಪತ್ತೆ ಪ್ರಕರಣ: ಸಾವಿನಲ್ಲಿ ಮುಂದುವರಿದ ನಿಗೂಢತೆ

ಉಪ್ಪಳ: ಉಪ್ಪಳ ರೈಲ್ವೇ ಹಳಿ ಸಮೀಪ ಮಂಗಳೂರು ನಿವಾಸಿಯಾದ ನೌಫಲ್ ಎಂಬ ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಸರ್ಜನ್ ಡಾ| ರೋಹಿತ್‌ರ ನೇತೃತ್ವದಲ್ಲಿ  ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೌಫಲ್‌ನ ಸಾವು  ಕೊಲೆಕೃತ್ಯವಾಗಿದೆಯೇ ಎಂಬ ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಸರ್ಜನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸರ್ಜನ್ ಜೊತೆಗೆ ಮಂಜೇಶ್ವರ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್, ಹೊಸದುರ್ಗ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್, ಫಾರೆನ್ಸಿಕ್ ತಜ್ಞರು   ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ.  ಇದೇ ಸಂದರ್ಭದಲ್ಲಿ ನೌಫಲ್‌ನ  ಸ್ಕೂಟರ್  ಮೃತದೇಹ ಪತ್ತೆಯಾದ ಸ್ಥಳದಿಂದ ಒಂದೂವರೆ ಕಿಲೋ ಮೀಟರ್ ದೂರ ಹೊಳೆಬದಿ ಪತ್ತೆಯಾಗಿದೆ. ಅಲ್ಲದೆ ನೌಫಲ್‌ನ ಎರಡು ಮೊಬೈಲ್‌ಗಳ ಪೈಕಿ ಒಂದು ಮೊಬೈಲ್ ಕೂಡಾ ಪತ್ತೆಯಾಗಿದೆ.  ನೌಫಲ್‌ನ ಸಾವಿನ ಬಗ್ಗೆ  ನಿಗೂಢತೆ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಮೂರು ಕೊಲೆ ಪ್ರಕರಣಗಳ ಸಹಿತ ೨೩ ಪ್ರಕರಣಗಳಲ್ಲಿ ನೌಫಲ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ನೌಫಲ್‌ನ ಮೃತದೇಹ ಉಪ್ಪಳ   ಗೇಟ್ ಸಮೀಪ ರೈಲ್ವೇ ಹಳಿ ಬದಿಯಲ್ಲಿ ಪತ್ತೆಯಾ ಗಿತ್ತು. ಕುತ್ತಿಗೆ ಹಾಗೂ ತಲೆಯಲ್ಲಿ  ಗಾಯಗೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು, ಪ್ಯಾಂಟ್ ಜೇಬಿನಲ್ಲಿ ಸಿರಿಂಜು ಹಾಗೂ ವಾಹನದ ಕೀಲಿ ಕೈ ಕೂಡಾ ಪತ್ತೆಯಾಗಿತ್ತು.

You cannot copy contents of this page