ಕಾಸರಗೋಡು: ಭಾರತೀಯ ನ್ಯಾಯವಾದಿಗಳ ಪರಿಷತ್ ಕಾಸರ ಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ನ್ಯಾಯವಾದಿಗಳ ಕುಟುಂಬ ಸಂಗಮ ನಡೆಸಲಾಯಿತು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ. ಶಂಕರನ್ ನಾಯರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್, ನ್ಯಾ| ಕರುಣಾಕರನ್ ನಂಬ್ಯಾರ್ ಮಾತನಾಡಿದರು. ನ್ಯಾಯ ವಾದಿಗಳಾದ ಅನಿಲ್ ಕೆ.ಜಿ., ಬೀನಾ ಕೆ.ಎಂ, ಸಚ್ಚಿನ್ ಶೆಣೈ ಶುಭಾಶಂಸನೆ ಗೈದರು. ಜಿಲ್ಲಾ ಕಾರ್ಯದರ್ಶಿ ನ್ಯಾ| ನವೀನ್‌ರಾಜ್ ಸ್ವಾಗತಿಸಿ, ಹೊಸದುರ್ಗ ಯೂನಿಟ್ ಅಧ್ಯಕ್ಷ ನ್ಯಾ| ಎ. ಮಣಿ ಕಂಠನ್ ವಂದಿಸಿದರು. 25 ವರ್ಷಗಳ ದಾಂಪತ್ಯ ಜೀವನ ಪೂರ್ತಿಗೊಳಿಸಿದ ನ್ಯಾಯವಾದಿ ದಂಪತಿಗಳನ್ನು ಹಿರಿಯ ನ್ಯಾಯವಾದಿಗಳು ಗೌರವಿಸಿದರು. ಕಾಸರಗೋಡು, ಹೊಸದುರ್ಗ ನ್ಯಾಯಾಲಯಗಳ ನ್ಯಾಯವಾದಿಗಳು, ಕುಟುಂಬ ಸದಸ್ಯರು ಭಾಗವಹಿಸಿದರು. ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆಯಿತು.







